ರೈತರ ಮೊಬೈಲ್ ನಂಬರ್ ಗೆ ನೇರವಾಗಿ ಎಲ್ಲಾ ವಿಷಯ ಸದೇಶದ ಮೂಲಕ ರೈತರಿಗೆ ತಿಳಿಯುತ್ತದೆ ಇದರಲ್ಲಿ ಇಲಾಖೆಯಲ್ಲಿ ಅವ್ಯವಹಾರ ನಡೆಯಲು ಅವಕಾಶ ಇರುವುದಿಲ್ಲ ಎಂದು. ವಿಶ್ವನಾಥ್ ಗೌಡ”
ಪಾವಗಡ :ಪಟ್ಟಣದ ಚಳ್ಳಕೆರೆ ಮುಖ್ಯರಸ್ತೆಯಲ್ಲಿ ಬರುವ ತೋಟಗಾರಿಕೆ ಇಲಾಖೆಯ ಕಚೇರಿಯಲ್ಲಿ ಬುಧವಾರ ರಂದು ಹಮ್ಮಿಕೊಳ್ಳಲಾಗಿತ್ತು.
ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಸಹಾಯಕ ತೋಟಗಾರಿಕೆ ನಿರ್ಧೆಶಕರಾದ ವಿ.ಎಸ್.ವಿಶ್ವನಾಥ್ ರವರು ತಮ್ಮ ಇಲಾಖೆ ಆರೋಪಗಳಿಗೆ ಉತ್ತರ ನೀಡಿದರು.
ಬುಧವಾರ ನಮ್ಮ ಇಲಾಖೆ ಬಗ್ಗೆ ಅವ್ಯವಹಾರ ನಡೆದಿದೆ ಎಂದು ಪತ್ರಿಕೆಯಲ್ಲಿ ವರದಿಯಾಗಿತ್ತು ಇದಕ್ಕೆ ಸಂಬಂದಿಸಿದಂತೆ ನಮ್ಮ ತಾಲ್ಲೂಕಿನಲ್ಲಿ ನನ್ನ ಅವಧಿಯಲ್ಲಿ ಯಾವುದೆ ಅವ್ಯವಹಾರ ನಡೆದಿಲ್ಲ ಒಂದು ವೇಳೆ ರೈತರಿಗೆ ಅನಾನುಕೂಲ ಆಗಿದ್ದರೆ ಅಂತಹ ರೈತರ ಕೂಡಲೆ ನಮ್ಮ ಇಲಾಖೆಗೆ ಬಂದು ಮಾಹಿತಿ ತಿಳಿಸಿ ನಾವು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೆವೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ನಡೆಯುತ್ತಿದ್ದು ನಮ್ಮ ರೈತರೆ ಕಂಪನಿಗಳನ್ನು ಆಯ್ಕೆ ಮಾಡಿಕೊಂಡು ಬಂದರೆ ಅವರಿಗೆ ಕಾರ್ಯಾದೇಶ ನೀಡುತ್ತಿದ್ದೆವೆ ಅವರಿಗೆ ಕಾರ್ಯಾದೇಶ ಬಂದ ನಂತರ ರೈತರ ಮೊಬೈಲ್ ನಂಬರ್ ಗೆ ನೇರವಾಗಿ ಎಲ್ಲಾ ವಿಷಯ ಸದೇಶದ ಮೂಲಕ ರೈತರಿಗೆ ತಿಳಿಯುತ್ತದೆ ಇದರಲ್ಲಿ ಅವ್ಯವಹಾರ ನಡೆಯಲು ಅವಕಾಶ ಇರುವುದಿಲ್ಲ ಎಂದು ಹೇಳಿದ್ದಾರೆ.
ಈ ಯೋಜನೆಯಲ್ಲಿ ರೈತರೆ ಪೂರ್ಣ ಹಣ ಪಾವತಿ ಮಾಡಿದರೆ ಪೂರ್ಣ ಸಹಾಯಧನದ ಹಣ ರೈತರ ಖಾತೆಗೆ ಹಣ ವರ್ಗಾವಣೆ ಆಗುತ್ತದೆ ಒಂದು ವೇಳೆ ರೈತರು ವಂತಿಕೆ ಹಣ ಮಾತ್ರ ಪಾವತಿ ಮಾಡಿದ್ದಲ್ಲಿ ರೈತರ ಒಪ್ಪಿಗೆ ಪಡೆದು ಖಾಸಗಿ ಕಂಪನಿಗಳಿಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದರು.
ಕಳಪೆ ಗುಣಮಟ್ಟದ ಪರಿಕರಗಳನ್ನು ನಾವು ನೀಡುತ್ತಿಲ್ಲ ನಾವು ಉತ್ತಮ ಗುಣಮಟ್ಟದ ISI ಮಾನ್ಯತೆ ಪಡೆದ ಪರಿಕರಗಳನ್ನೆ ರೈತರಿಗೆ ವಿತರಿಸುತ್ತಿದ್ದೆವೆ ಎಂದು ಸುದ್ದಿಗಾರರಿಗೆ ತಿಳಿಸಿದರು.




