ಕಲಬುರಗಿ: ಸ್ವಾಮೀಜಿಯೊಬ್ಬರು ಶಿವಲಿಂಗದ ಮೇಲೆ ಕಾಲಿಟ್ಟು ಪಾದಪೂಜೆ ಮಾಡಿಸಿಕೊಂಡ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ನಡೆದಿದೆ.
ಪ್ರಾಣ ಪ್ರತಿಷ್ಟಾಪನೆಗೆ ಸಿದ್ದಗೊಂಡಿದ್ದ ಶಿವಲಿಂಗದ ಮೇಲೆ ಕಾಲಿಟ್ಟು ದಿಗ್ಗಾಂವ ಗ್ರಾಮದ ಪಂಚಗೃಹ ಹಿರೇಮಠದ ಪೀಠಾಧಿಪತಿ ಸಿದ್ದವೀರ ಶಿವಾಚಾರ್ಯರಿಗೆ ಪಾದಪೂಜೆ ಮಾಡಿಸಿಕೊಂಡಿದ್ದಾರೆ.
ಪಾತ್ರೆಯಲ್ಲಿ ಶಿವಲಿಂಗವಿಟ್ಟು ಶಿವಲಿಂಗದ ಮೇಲೆ ಕಾಲಿಟ್ಟ ಸ್ವಾಮೀಜಿಗೆ ಭಕ್ತರು ಪಾದಪೂಜೆ ನೆರವೇರಿಸಿದ್ದಾರೆ. ಹಾಲಿನಿಂದ ಪಾದಗಳನ್ನು ತೊಳೆದು ಕುಂಕುಮ ಹಚ್ಚಿ ಬಿಲ್ವಪತ್ರೆ ಹಾಗೂ ಹೂವಿನಿಂದ ಪೂಜೆ ಮಾಡಲಾಗಿದೆ.
ಸದ್ಯ ಸ್ವಾಮೀಜಿ ಶಿವಲಿಂಗದ ಮೇಲೆ ಕಾಲಿಟ್ಟು ಪಾದ ಪೂಜೆಗೆ ಮಾಡಿರುವುದಕ್ಕೆ ಪರ-ವಿರೋಧದ ಚರ್ಚೆ ಆರಂಭವಾಗಿದೆ. ಸ್ವಾಮೀಜಿಯ ಪಾದ ಪೂಜೆಗೆ ಶಿವನ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬೆನ್ನಲ್ಲೇ ಮಠ ಸ್ಪಷ್ಟನೆ ನೀಡಿದ್ದು, ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಗಿದೆ ಎಂದಿದೆ.