ಬೆಂಗಳೂರು : ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ನಂದಿನಿ ಲೇಔಟ್ ನ ಸಾನ್ಸ್ ಪಬ್ಲಿಕ್ ಸ್ಕೂಲ್ ನ ‘ಸಿರಿ ಕಿಡ್ ಫೆಸ್ಟ್ -2025’ ವಾರ್ಷಿಕೋತ್ಸವನ್ನು ಸುಮನಹಳ್ಳಿ ಕ್ರಾಸ್ ಬಳಿ ಇರುವ ಬಾಬು ಜಗಜೀವನ್ ರಾಮ್ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಮಾಜಿ ಸಚಿವ ಹಾಗೂ ಮಹಾಲಕ್ಷ್ಮೀ ಲೇಔಟ್ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ, ಗೋಪಾಲಯ್ಯ, ಮಾಜಿ ಪಾಲಿಕೆ ಸದಸ್ಯ ಎಸ್, ಕೇಶವಮೂರ್ತಿ, ಸಾನ್ಸ್ ಪಬ್ಲಿಕ್ ಶಾಲೆಯ ಛೇರ್ಮನ್ ಶ್ರೀಕಂಠಪ್ಪ, ಕಿಮ್ಸ್ ಆಸ್ಪತ್ರೆ ಛೇರ್ಮನ್ ಖ್ಯಾತ ವೈದ್ಯ ಡಾ.ಅಂಜನಪ್ಪ, ನಟ ಧನುಷ್,ಯುವ ಕಾಂಗ್ರೆಸ್ ಮುಖಂಡ ಶಿವಕುಮಾರ್, ಬಿಜೆಪಿ ಮುಖಂಡ ವೆಂಕಟೇಶ್ ಮೂರ್ತಿ ಇವರುಗಳು ದೀಪ ಬೆಳಗಿಸಿ ಉದ್ಘಾಟಿಸಿದರು.

ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ, ಡ್ಯಾನ್ಸ್, ಹಾಡು, ದೇಶಭಕ್ತಿ ಸಾರುವ ನೃತ್ಯ ಹಲವು ಸಂಗೀತ ಜರುಗಿದವು.
ಶಾಸಕ ಗೋಪಾಲಯ್ಯ ಮಾತನಾಡಿ ವಾರ್ಷಿಕೋತ್ಸವ ಕಾರ್ಯಕ್ರಮವು ಮಕ್ಕಳ ಹಬ್ಬ ಮತ್ತು ಮಕ್ಕಳಲ್ಲಿರುವ ಪ್ರತಿಭೆ ಹೊರ ತರಲು ಸಹಾಯ ಮಾಡುತ್ತದೆ. ಪಾಠ ಪ್ರವಚನ , ಕ್ರೀಡೆ, ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸಬೇಕು, ಮಕ್ಕಳು ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು. ಉತ್ತಮ ವಿದ್ಯಾಭ್ಯಾಸ ಮಾಡಿ ಶಿಕ್ಷಣ ಸಂಸ್ಥೆಗೆ ತಂದೆ ತಾಯಿ, ಕಲಿಸಿದ ಗುರುಗಳಿಗೆ ಕೀರ್ತಿ ತರ ಬೇಕು ಎಂದರು. ವಾರ್ಷಿಕೋತ್ಸವ ಅಂಗವಾಗಿ ಮಕ್ಕಳಿಗೆ ಮತ್ತು ಪೋಷಕರಿಗೆ ವಿವಿಧ ಕ್ರೀಡೆಗಳು ಏರ್ಪಡಿಸಲಾಗಿತ್ತು. ಕ್ರೀಡೆಯಲ್ಲಿ ವಿಜೇತರಿಗೆ ಬಹುಮಾನ ನೀಡಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಶುಭ ಕೋರಿದರು.
ಈ ಸಂದರ್ಭದಲ್ಲಿ ನಟ ಧನುಷ್,ಯುವ ಕಾಂಗ್ರೆಸ್ ಮುಖಂಡ ಶಿವಕುಮಾರ್, ಬಿಜೆಪಿ ಮುಖಂಡ ವೆಂಕಟೇಶ್ ಮೂರ್ತಿ, ಶಾಲಾ ಮುಖ್ಯೋಪಾಧ್ಯಾಯರು ಸಿಬ್ಬಂದಿ ವೃಂದ ದವರು ಪೋಷಕರು ವಿದ್ಯಾರ್ಥಿಗಳು ಸಮಸ್ತ ನಾಗರಿಕ ಬಂಧು ಭಗನಿಯರು ಮುಂತಾದವರು ಇದ್ದರು.
ವರದಿ : ಅಯ್ಯಣ್ಣ ಮಾಸ್ಟರ್




