Ad imageAd image

ವಾಸವಿ ಪೆನುಗೊಂಡ ಯಾತ್ರಾರ್ಥಿಗಳಿಗೆ ಗೌರವ ಸಮರ್ಪಿಸಿದ ಆರ್ಯ ವೈಶ್ಯ ಮಂಡಳಿ

Bharath Vaibhav
ವಾಸವಿ ಪೆನುಗೊಂಡ ಯಾತ್ರಾರ್ಥಿಗಳಿಗೆ ಗೌರವ ಸಮರ್ಪಿಸಿದ ಆರ್ಯ ವೈಶ್ಯ ಮಂಡಳಿ
WhatsApp Group Join Now
Telegram Group Join Now

ತುರುವೇಕೆರೆ: ತಾಲ್ಲೂಕು ಆರ್ಯವೈಶ್ಯ ಸಮುದಾಯದಿಂದ ವಾಸವಿ ಪೆನುಗೊಂಡ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿ ಬಂದ ಎಲ್ಲರನ್ನೂ ಆರ್ಯವೈಶ್ಯ ಮಂಡಳಿ, ವಾಸವಿ ಮಹಿಳಾ ಮಂಡಳಿ, ವಾಸವಿ ಯುವಜನ ಮಂಡಳಿ, ಶ್ರೀನಿಧಿ ಭಜನಾ ಮಂಡಳಿ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ನರಸಿಂಹಮೂರ್ತಿ, ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಪೆನುಗೊಂಡ ಪಟ್ಟಣದಲ್ಲಿರುವ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯವು ಸುಂದರವಾದ ವಾಸ್ತುಶಿಲ್ಪವನ್ನು ಹೊಂದಿರುವ ಆಕರ್ಷಕ ಬಹು-ಬಣ್ಣದ (ಗಾಳಿ ಗೋಪುರ) ಏಳು ಅಂತಸ್ತಿನ ಗೋಪುರವಾಗಿದೆ. ಈ ಪೆನುಗೊಂಡ ಕ್ಷೇತ್ರವನ್ನು ‘ವೈಶ್ಯರ ಕಾಶಿ’ ಎಂದು ಪರಿಗಣಿಸಲಾಗಿದೆ ಮತ್ತು ಇದು ವೈಶ್ಯರಿಗೆ ಪವಿತ್ರ ಸ್ಥಳವಾಗಿದೆ ಎಂದರು.

ವಾಸವಿ ಮಾತೆಯ ವಿಗ್ರಹವನ್ನು 11 ನೇ ಶತಮಾನದಲ್ಲಿ ಸ್ಥಾಪಿಸಲಾಯಿತು, ಆದರೆ ನಿಜವಾದ ದೇವಾಲಯವು 3000 ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ಇತಿಹಾದ ಪ್ರಸಿದ್ಧ ದೇವಾಲಯ ಹಾಗೂ ದೇವಿ ದರ್ಶನ ಪಡೆದು ಬಂದ ಆರ್ಯ ವೈಶ್ಯ ಬಾಂದವರೇ ಪುಣ್ಯವಂತರು ಎಂದರು.

ಪೆನುಗೊಂಡ ಯಾತ್ರೆಯನ್ನು ಯಶ‌ಸ್ವಿಯಾಗಿ ಪೂರೈಸಿ ಬಂದ ಯಾತ್ರಾರ್ಥಿಗಳನ್ನು ಆರ್ಯ ವೈಶ್ಯ ಮಂಡಳಿ, ವಾಸವಿ ಮಹಿಳಾ ಮಂಡಳಿ, ವಾಸವಿ ಯುವಜನ ಮಂಡಳಿ, ಶ್ರೀನಿಧಿ ಭಜನಾ ಮಂಡಳಿ ವತಿಯಿಂದ ಗೌರವಿಸುತ್ತಿರುವುದು ಬಹಳ ಸಂತೋಷ ತಂದಿದೆ ಎಂದರು.

ಈ ಸಂದರ್ಭದಲ್ಲಿ ಪದ್ಮಾವತಿ ನರಸಿಂಹಮೂರ್ತಿ, ಶ್ರೀನಿವಾಸ್, ವಾಸವಿ, ಸತೀಶ್, ಪ್ರದೀಪ್, ಸಾಗರ್ ಮುಂತಾದವರಿದ್ದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!