ಕ್ರೀಡಾಕೂಟದಲ್ಲಿ ಕಂದಗಲ್ಲ ಮೊರಾರ್ಜಿ ವಸತಿ ಶಾಲೆಯ ಅದ್ವಿತೀಯ ಸಾಧನೆ.
ಕಂದಗಲ್ಲ :ಇಲಕಲ್ಲ ತಾಲೂಕಿನ ಕಂದಗಲ್ಲ ಹಾಗೂ ನಂದವಾಡಗಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ಕಂದಗಲ್ಲ ಮೊರಾರ್ಜಿ ಶಾಲೆಯ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಮಾಡಿದ್ದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಬಾಲಕರ ವಾಲಿಬಾಲ್ ಪ್ರಥಮ, ಬಾಲಕರ ಥ್ರೋ ಬಾಲ್ ಪ್ರಥಮ, ಬಾಲಕರ ರಿಲೇ ಪ್ರಥಮ,ಬಾಲಕಿಯರ ವಾಲಿಬಾಲ್ ಪ್ರಥಮ,
ಬಾಲಕಿಯರ ಕಬಡ್ಡಿ ದ್ವಿತೀಯ, ಬಾಲಕಿಯರ ಥ್ರೋ ಬಾಲ್ ದ್ವಿತೀಯ, ಇನ್ನು ವಯಕ್ತಿಕ ಆಟ ವಿಭಾಗ ದಲ್ಲಿ ವಿಷ್ಣು ಮಾದರ ಉದ್ದ ಜಿಗಿತ ಪ್ರಥಮ, 100 ಮೀಟರ್ ಓಟ ದ್ವಿತೀಯ,ವಿನಯ್ ಯಡಹಳ್ಳಿ ಎತ್ತರ ಜಿಗಿತ ದ್ವಿತೀಯ, ಸಮರ್ಥ ಹಡಗಲಿ 400 ಮೀಟರ್ ಓಟ ದ್ವಿತೀಯ, ಈ ರೀತಿಯಾಗಿ ಎಲ್ಲಾ ಕ್ರೀಡೆಯಲ್ಲಿ ಸಾಧನೆಗೈದ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ತರಬೇತಿ ನೀಡಿದ ಶಾಲಾ ಶಿಕ್ಷಕ ಚಿದಾನಂದ ಗೌಡರ ಹಾಗೂ ಶಾಲೆಯ ಪ್ರಾಂಶುಪಾಲರಾದ ಶಂಕರಪ್ಪ ಜಿ ಹೂಗಾರ ನಿಲಯ ಪಾಲಕರು ಮತ್ತು ಶಿಕ್ಷಕ/ ಶಿಕ್ಷಕಿಯರು, ಬೋಧಕೇತರ ಸಿಬ್ಬಂದಿ ವರ್ಗದವರನ್ನು ಗ್ರಾಮದ ಹಿತಚಿಂತಕರಾದ ರಮೇಶ್ ದಾಸರ, ರಾಜು ಪರಸರ, ಲಿಂಗರಾಜು ಶಿರಗುಂಪಿ, ಶಂಕರಕಾಳಿಪ್ರಸಾದ್, ಶ್ರೀಕಾಂತ್ ಸಜ್ಜನ, ಪತ್ರಕರ್ತ ವೀರೇಶ್ ಶಿಂಪಿ ಅಭಿನಂದಿಸಿದ್ದಾರೆ.
ವರದಿ :ದಾವಲ್ ಶೇಡಂ




