Ad imageAd image

ರೈತರ ನಿದ್ದೆಗೆಡಿಸಿದ್ದ ಕರಡಿ, ಕೊನೆಗೂ ಕೆಳಗಳಹಟ್ಟಿ ಬಳಿ ಅರಣ್ಯ ಇಲಾಖೆ , ಬೋನ್ ಗೆ ಕರಡಿ

Bharath Vaibhav
ರೈತರ ನಿದ್ದೆಗೆಡಿಸಿದ್ದ ಕರಡಿ, ಕೊನೆಗೂ ಕೆಳಗಳಹಟ್ಟಿ ಬಳಿ ಅರಣ್ಯ ಇಲಾಖೆ , ಬೋನ್ ಗೆ ಕರಡಿ
WhatsApp Group Join Now
Telegram Group Join Now

ಮೊಳಕಾಲ್ಮುರು:-   ಕರಡಿಯು ಕಳೆದ ಹಲವು ತಿಂಗಳಿನಿಂದ ರೈತರ ತೋಟಗಳಲ್ಲಿ ನುಗ್ಗಿ ದಾಳಿ ಮಾಡಿ ರೈತರ ಬೆಳೆಗಳಿಗೆ ಹಾನಿ ಮಾಡುತ್ತಿದ್ದು, ಅಷ್ಟೇ ಅಲ್ಲದೆ ರಾತ್ರಿ ವೇಳೆ ಓಡಾಡಲು ಜನರಿಗೂ ತೊಂದರೆ ಉಂಟಾಗಿತ್ತು ಯಾವ ಕ್ಷಣದಲ್ಲಾದರೂ ಕರಡಿ ದಾಳಿ ನಡೆಸಬಹುದು ಎಂದು ಮುಂಜಾಗ್ರತಾ ಕ್ರಮವಾಗಿ ಕೆಳಗಳಹಟ್ಟಿ ಬಳಿಯ ರೈತರು ಕರಡಿಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ರೈತರ ಮನವಿ ಹಿನ್ನೆಲೆ ಪ್ರತಿನಿತ್ಯ ಕರಡಿಯು ಕೆಳಗಳಹಟ್ಟಿ ಸೇತುವೆ ಬಳಿ ಹಾದು ಹೋಗುತ್ತಿದ್ದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಸೇತುವೆ ಬಳಿ ಕಳೆದ ಒಂದು ವಾರದ ಹಿಂದೆಯಷ್ಟೇ ಬೋನ್ ಇಟ್ಟಿದ್ದರು,

ಸೋಮವಾರ ಬೆಳಗಿನ ಕರಡಿ ಬೋನ್ ಗೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಗಸ್ತು ಇದ್ದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯವನ್ನು ಮುಟ್ಟಿಸಿದ್ದಾರೆ.ಸೋಮವಾರ ಬೆಳಿಗ್ಗೆ 8 ಗಂಟೆಗೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬೋನ್ ನಲ್ಲಿ ಸೆರೆಯಾಗಿದ್ದ ಕರಡಿಯನ್ನು ಪಟ್ಟಣದ ಹೊರವಲಯದಲ್ಲಿರುವ ನರ್ಸರಿಗೆ ಶಿಫ್ಟ್ ಮಾಡಿದ್ದಾರೆ.ಸ್ಥಳದಲ್ಲಿ ಡಿ ಆರ್ ಎಫ್ ಹಸನ್ ಬಾಷ ಮತ್ತು ಇಲಾಖೆಯ ಸಿಬ್ಬಂದಿಗಳಾದ ಶಿವರಾಜ್ ಸಂತೋಷ ಸೇರಿದಂತೆ ಹಲವರಿದ್ದರು.

ವರದಿ:- ಪಿ ಎಂ ಗಂಗಾಧರ

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!