ಚೆಲ್ಮಸ್ ಬೋರ್ಡ ( ಇಂಗ್ಲೆಂಡ್) : 19 ವರ್ಷದೊಳಗಿನವರ ವಯೋಮಿತಿಯ ಯುವ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಿರುವ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮೊದಲ ದಿನದ ಆಟ ಮುಗಿಸಿದ್ದು, ಇಂಗ್ಲೆಂಡ್ ಯುವ ತಂಡ 7 ವಿಕೆಟ್ ಗೆ 229 ರನ್ ಗಳಿಸಿದೆ.

ಮೊದಲ ದಿನದಾಟದಲ್ಲಿ ಕೇವಲ 62 ಓವರುಗಳ ಆಟ ಸಾಧ್ಯವಾಗಿದ್ದು, ತವರು ತಂಡದ ಯುವ ಆಟಗಾರರು 229 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಗಳನ್ನು ಕಳೆದುಕೊಂಡರು. ಭಾರತೀಯ ಯುವ ಬೌಲರುಗಳ ಪರ ಾದಿತ್ಯ ರಾವತ್ 46 ಕ್ಕೆ 2 ಹಾಗೂ ಆರ್ .ಎಸ್. ಅಂಬ್ರೀಷ್ 44 ಕ್ಕೆ 2 ಹಾಗೂ ನಮನ್ ಪುಷ್ಪಾಕ್ 48 ಕ್ಕೆ 2 ವಿಕೆಟ್ ಪಡೆದರು.




