ಹಲ್ಯಾಳ : ಗ್ರಾಮದ ಸಮೀಪ ಕರ್ನಾಟಕ ಪಬ್ಲಿಕ್ ಶಾಲೆ ನಂದಿ ಇಂಗಳಗಾಂವ ನಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ವಿತರಣೆ ಮತ್ತು ಬೀಳ್ಕೊಡುವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ವಿದ್ಯಾರ್ಥಿಗಳು ತಮ್ಮ ಅನಿಸಿಕೆಯಲ್ಲಿ ಈ ಶಾಲೆಯಲ್ಲಿ ಶಿಕ್ಷಕರ ಮಾರ್ಗದರ್ಶನ, ಸಂಸ್ಕಾರ ನಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡು ಒಬ್ಬ ಉತ್ತಮ ಪ್ರಜೆಯಾಗಿ ಹೊರಹೊಮ್ಮುತ್ತೇವೆ. ಈ ಶಾಲೆಯಲ್ಲಿರುವ ಶಿಕ್ಷಕರು ನಮಗೆ ಇನ್ಮುಂದೆ ಸಿಗದೆ ಇರಬಹುದು ಎಂದು ತಮ್ಮ ತೊದಲ್ ನುಡಿಗಳನ್ನಾಡುತ್ತಾ ಕಣ್ಣೀರು ಚೆಲ್ಲಿದರು. ವಿದ್ಯಾರ್ಥಿಗಳ ತೊಗಲು ನುಡಿ ಆಲಿಸಿದ ಶಿಕ್ಷಕರೆಲ್ಲ ಭಾವುಕರಾದರು.
ತದನಂತರ ಶಾಲೆಯ ಹಿರಿಯ ಶಿಕ್ಷಕರಾದ ಶ್ರೀ ಎ ಬಿ ನದಾಪ್ ಗುರುಗಳು ಮಾತಾಡಿ ಮಕ್ಕಳು ಒಳ್ಳೆಯ ನಡವಳಿಗೆ ರೂಢಿಸಿಕೊಂಡು ಉತ್ತಮ ಪ್ರಜೆಗಳಾಗಿ ಬಾಳಬೇಕೆಂದು ಹೇಳಿದರು. ನಂತರ ವರ್ಗ ಗುರುಗಳಾದ ಹಣಮಂತ ಟಿಂಗಾಣಿ ಗುರುಗಳು ಮಾತಾಡಿ ಮಕ್ಕಳ ನಡತೆಯನ್ನು ಪ್ರಶಂಶಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಕೆ ಬಿ ಗುಮತಾಜ್, ಶ್ರೀಯುತ ಸಿ ಎಂ ಕಾಂಬಳೆ ಶ್ರೀಯುತ ಎಂ ಜಿ ಬಿಸ್ವಾಗಾರ್ ಗುರುಗಳು ಮಾತಾಡಿ ಮಕ್ಕಳಿಗೆ ಶುಭಾಶಯ ತಿಳಿಸಿದರು.ಕಾರ್ಯಕ್ರಮ ಅಧ್ಯಕ್ಷತೆಯನ್ನು ಶಾಲೆಯಲ್ಲಿ ಉಪಾಪ್ರಾಂಶುಪಾಲಾರದ ಶ್ರೀ ಎಸ್ ರಮೇಶ್ ವಹಿಸಿಕೊಂಡಿದ್ದರು ಅವರು ಉತ್ತಮ ಫಲಿತಾಂಶವೇ ನೀವು ನೀಡುವ ಗುರು ಕಾಣಿಕೆ ಆದ್ದರಿಂದ ಧೈರ್ಯದಿಂದ ಪರೀಕ್ಷೆ ಎದುರಿಸಿ ನಮ್ಮ ಶಾಲೆಯ ಹೆಸರು ತನ್ನಿರಿ ಎಂದು ಹೇಳಿದರು. ಈ ವೇಳೆ ಅಥಿತಿಗಳಾಗಿ ಶ್ರೀಯುತ ಗುರು ಮೋಕಾಶಿ ಮತ್ತು ಮುಖಾಂಡಾರದ ಮೂಡಿಗೌಡರ, ಸಿಬ್ಬಂದಿಗಳಿದ್ದರು.