ಯಳಂದೂರು: ಯಳಂದೂರು ತಾಲೂಕಿನ ಮದ್ದೂರು ಗ್ರಾಮದಲ್ಲಿ ಭೀಮ ಕೊರೆಗಾವ್ ವಿಜಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು
ಮದ್ದೂರು ಗ್ರಾಮದ ಬಸ್ ನಿಲ್ದಾಣದ ಬಲಿ ಭೀಮ ಕೊರಗ ವಿಜಯಸ್ತಂಬವ ನಿಲ್ಲಿಸಿ ವಿಜಯಸ್ತಂಬಕ್ಕೆ ಸಿಂಗರಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಹಾಗೂ ವಿಜಯಸ್ತಂಬಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮಿಸಿದರು
ನಾದಸ್ವರಕ್ಕೆ ವಿದ್ಯಾರ್ಥಿಗಳು ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು ಊರಿನ ಮುಖಂಡರು ಕುಣಿದು 207ನೇ ಭೀಮ ಕೊರೆಗಾಂವ್ ವಿಜಯೋತ್ಸವವನ್ನು ಆಚರಿಸಿದರು
ಈ ಸಂದರ್ಭದಲ್ಲಿ ಮೈಸೂರು ಯುವರಾಜ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಎಂ ರುದ್ರಯ್ಯ ಅವರು ಮಾತನಾಡಿ ದೇಶಾದ್ಯಂತ ಮುಗಿಲು ಮುಟ್ಟಿದೆ 1818ರಲ್ಲಿ ನಡೆದಂತಹ ಮಹರ್ ಹಾಗೂ ಮರಾಠಪೇಶ್ವರಕ್ಕೆ ಈ ಯುದ್ಧದಲ್ಲಿ ಮೊಹರ್ ಸೈನಿಕರು ಗೆದ್ದ ಈ ದಿನವನ್ನು ನಾವು ಭೀಮ ಕೊರೆಗಾವ್ ವಿಜಯೋತ್ಸವ ಎಂದು ದೇಶಾದ್ಯಂತ ಆಚರಣೆ ಮಾಡುತ್ತಿದ್ದೇವೆ
ಈ ವಿಜಯೋತ್ಸವದ ಸ್ತಂಭದ ಬಗ್ಗೆ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಮೊದಲ ಬಾರಿಗೆ ದಾಖಲಾತಿಯನ್ನ ಒಪ್ಪಿಸಿದಂತವರು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಮದ್ದೂರು ಗ್ರಾಮದ ಯುವಕರು ಅಂಬೇಡ್ಕರ್ ಸಂಘದ ಪದಾಧಿಕಾರಿಗಳು ಊರಿನ ಮುಖಂಡರುಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು
ವರದಿ :ಸ್ವಾಮಿ ಬಳೇಪೇಟೆ