ಬಾಗಲಕೋಟೆ : ನಿಂತಿದ್ದ ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಸಹೋದರರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರಾಮಥಾಳ ಕ್ರಾಸ್ ಬಳಿ ನಡೆದಿದೆ.
ಇಳಕಲ್ ಪಟ್ಟಣದ ನಿವಾಸಿಗಳಾದ ಅಮರೇಶ್ ಬೆನಕನಾಳಮಠ(21), ಶರಣಯ್ಯ ಬೆನಕನಾಳಮಠ(19) ಮೃತಪಟ್ಟ ಬೈಕ್ ಸವಾರರು. ಸ್ಥಳಕ್ಕೆ ಅಮೀನಗಢ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.