ಮೊಳಕಾಲ್ಮೂರು: ಭ್ರಷ್ಟ ಜನವಿರೋಧಿ ಆಡಳಿತಕ್ಕೆ ದೆಹಲಿ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದು ನೂತನ ಮಂಡಲ ಅಧ್ಯಕ್ಷರಾದ ಕೆ ಟಿ ಶ್ರೀರಾಮ ರೆಡ್ಡಿ ತಿಳಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ ಭ್ರಷ್ಟಾಚಾರ ಹಗರಣಗಳ ಸರದಾರ ಕೇಜ್ರಿವಾಲ್ ದೆಹಲಿ ಜನತೆ ತಕ್ಕ ಉತ್ತರ ಕೊಟ್ಟಿದ್ದಾರೆ ಬಿಜೆಪಿ ಪಕ್ಷದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು. ಬಿಜೆಪಿ ಪಕ್ಷ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು ಕಳೆದ ಕೆಲವು ವರ್ಷಗಳಿಂದ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರದಲ್ಲಿತ್ತು, ಹಲ್ಲಿನ ಜನತೆ ಪಕ್ಷಕ್ಕೆ ಅಧಿಕಾರ ನೀಡಿದ್ದರು ದೆಹಲಿಯಲ್ಲಿ ಆಡಳಿತ ನಡೆಸಿದ ಮಾಜಿ ಮುಖ್ಯಮಂತ್ರಿ ಹಾಗೂ ಅಬಕಾರಿ ಹಗರಣದಲ್ಲಿ ಸಿಲುಕಿದ್ದ ಅಷ್ಟು ಜನಾ ಸಚಿವರನ್ನು ಸೋಲಿಸುವ ಮೂಲಕ ಜನತೆ ಎಲ್ಲರಿಗೂ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ನಿಕಟ ಪೂರ್ವ ಮಂಡಲ ಅಧ್ಯಕ್ಷರಾದ ಡಾ. ಪಿಎಂ ಮಂಜುನಾಥ್ ರವರು ಮಾತನಾಡಿ ಅರವಿಂದ್ ಕ್ರೇಜಿವಾಲ್ ನೇತೃತ್ವದ ಸರ್ಕಾರ ಹಗರಣಗಳಲ್ಲಿ ಮುಳಿಗಿಹೋಗಿತ್ತು, ಈ ನಿಟ್ಟಿನಲ್ಲಿ ಜನತೆ ಆಫ್ ಸರ್ಕಾರದ ವಿರುದ್ಧ ಮತ ಚಲಾಯಿಸಿ, ಬಿಜೆಪಿ ಪಕ್ಷಕ್ಕೆ ಗೆಲುವು ತಂದುಕೊಟ್ಟಿದ್ದಾರೆ ಎಂದರು. ನಾವು ದೆಹಲಿ ಒಂದೇ ಗೆದ್ದಿಲ್ಲ ದೇಶದ ಹೃದಯವನ್ನು ಗೆದ್ದಿದ್ದೇವೆ ನರೇಂದ್ರ ಮೋದಿ ಅಂತಹ ನಾಯಕ ಸಿಕ್ಕಿರುವುದು ನಮ್ಮ ನಿಮ್ಮೆಲ್ಲರ ಪುಣ್ಯ ಸತತವಾಗಿ 27 ವರ್ಷಗಳಿಂದ ಬಿಜೆಪಿ ಗೆಲುವು ಸಾಧಿಸಲು ಆಗಿರಲಿಲ್ಲ ಮೋದಿ ಇದ್ದರೆ ಈ ದೇಶದಲ್ಲಿ ಎಲ್ಲವೂ ಸಾಧ್ಯ ಅಸಾಧ್ಯವಾದುದ್ದು ಯಾವುದು ಇಲ್ಲ ಎಂದರು, ಉಚಿತ ಭರವಸೆಗಳನ್ನು ನೀಡಿದರೆ ಏನಾಗುತ್ತದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ದೆಹಲಿ ಅಲ್ಲಿನ ಮತದಾರಿಗೆ ನಮ್ಮ ಕಡೆಯಿಂದ ಅಭಿನಂದನೆ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಕೂಡ ಉಚಿತ ಭರವಸೆಗಳನ್ನು ನೀಡಿದ್ದ ಪರಿಣಾಮ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿಗೆ ಹಣವಿಲ್ಲ ಆದ್ದರಿಂದ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದರು.
ಅದೇ ರೀತಿ ಹಿರಿಯ ಮುಖಂಡರಾದ ಜಿಂಕಲ್ ಬಸವರಾಜ್ ಮಾತನಾಡಿ ಆಮ್ ಆದ್ಮಿ ಪಕ್ಷದ ಅಷ್ಟು ಜನ ಕೂಡ ಸೋತು ಮನೆಗೆ ಹೋಗಿದ್ದಾರೆ, ಬಾರಿ ಅವಾಂತರ ಸೃಷ್ಟಿಸಿದ ಕೇಜ್ರಿವಾಲ್ ಮನೆಗೆ ಕಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಟಿ ರೇವಣ್ಣ, ಡಾ ಪಿ ಎಂ ಮಂಜುನಾಥ್, ರಾಮರೆಡ್ಡಿ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಎನ್ ಪಿ ಪ್ರಭಾಕರ್, ಟೈಲರ್ ತಿಪ್ಪೇಸ್ವಾಮಿ ವಿನಯ್ ಕುಮಾರ್, ಶಾಂತವೀರಣ್ಣ ಮೋರ್ಚಾ ಅಧ್ಯಕ್ಷರಾದ ಲಕ್ಷ್ಮಣ್, ಸಿದ್ದಾರ್ಥ್ ಹರೀಶ್ ಕಡತೋಟಿ, ಪಕ್ಷದ ಮುಖಂಡರಾದ ಹೇಮಂತ್ ಶಿವಕುಮಾರ್ ಭೀಮಣ್ಣ ಅರ್ಜುನ್ ಶಿವಣ್ಣ ರಾಮಾಂಜನೇಯ ಇನ್ನು ಹಲವು ಪಕ್ಷದ ಕಾರ್ಯಕರ್ತರು ಇನ್ನು ಹಲವಾರು ಉಪಸ್ಥಿತರಿದ್ದರು.
ವರದಿ : ಪಿಎಂ ಗಂಗಾಧರ




