ಬೆಂಗಳೂರು : ಜಮ್ಮು-ಕಾಶ್ಮೀರದಲ್ಲಿ ಸೇನಾ ವಾಹನ ಕಂದಕಕ್ಕೆ ಉರುಳಿ ಮೃತಪಟ್ಟಂತಹ ರಾಜ್ಯದ ಮೂವರು ಯೋಧರ ಪಾರ್ಥಿವ ಶರೀರ ಇಂದು ರಾಜ್ಯಕ್ಕೆ ಆಗಮಿಸಿದೆ.
ಇಂದು ಬೆಳಗ್ಗೆ 9:30 ಕ್ಕೆ ಸಿಎಂ ಸಿದ್ದರಾಮಯ್ಯ ಅವರು ಯೋಧರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲಿದ್ದು, ನಂತರ ಯೋಧರ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ಕಳುಹಿಸಲಾಗುತ್ತಿದೆ.ಮೃತ ಯೋಧರ ಅಂತ್ಯಸಂಸ್ಕಾರಕ್ಕೆ ಮೂರು ಜಿಲ್ಲೆಯಲ್ಲೂ ಕೂಡ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ.
ಜಮ್ಮು-ಕಾಶ್ಮೀರದಲ್ಲಿ ಸೇನಾ ವಾಹನ ಕಂದಕ್ಕೆ ಉರುಳಿ ಕರ್ನಾಟಕ ಮೂಲದ ಮೂವರು ಯೋಧರು ಹುತಾತ್ಮರಾಗಿದ್ದಾರೆ.ಬೆಳಗಾವಿ, ಬಾಗಲಕೋಟೆ, ಉಡುಪಿ ಜಿಲ್ಲೆಯ ಮೂವರು ಯೋಧರು ಹುತಾತ್ಮರಾಗಿದ್ದಾರೆ.
ಮೃತ ಯೋಧರನ್ನು ಬೆಳಗಾವಿ ಬಳಿಯ ಸಾಂಬ್ರಾ ಗ್ರಾಮದ ಯೋಧ ಸುಬೇದಾರ್ ದಯಾನಂದ ತಿರಕಣ್ಣವರ (45), ಕುಂದಾಪುರ ಬಳಿಯ ಕೋಟೇಶ್ವರ ಬಿಜಾಡಿಯ ಅನೂಪ್ (33) ಮಹಾಲಿಂಗಪುರದ 25 ವರ್ಷದ ಮಹೇಶ್ ಮರಿಗೊಂಡ ಎಂದು ಗುರುತಿಸಲಾಗಿದೆ, ಹಾಗೂ ದುರಂತದಲ್ಲಿ ಮಹಾರಾಷ್ಟ್ರದ ಇಬ್ಬರು ಯೋಧರು ಅಸುನೀಗಿದ್ದಾರೆ.
160 ಅಡಿಯ ಕಂದಕಕ್ಕೆ ಸೇನಾ ವಾಹನ ಬಿದ್ದು ದುರಂತ ಸಂಭವಿಸಿದೆ. ಪೂಂಚ್ ಜಿಲ್ಲೆಯ ಮೆಂಧರ್ ಪ್ರದೇಶ ಬಲ್ನೋಯಿ ಮೂಲಕ ಸೇನಾ ವಾಹನ ಸಾಗುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿದ ವಾಹನ ಕಂದಕಕ್ಕೆ ಉರುಳಿ ಬಿದ್ದಿದೆ.ಅಪಘಾತದಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ.