——————–ಅಲ್ಪಾಟೆಕ್ (ರಾಜಶ್ರೀ) ಕಾರ್ಖಾನೆಯ ಸೋಲಾರ್ ಗಾರ್ಡನ್ ಬಳಿ ಘಟನೆ
————————ಇದು ಸಹಜ ಸಾವಲ್ಲ, ಕೊಲೆ ಎಂದು ಗೋಪಾಲ ನಾಟೆಕಾರ್ ಆರೋಪ

ಸೇಡಂ: ತಾಲೂಕಿನ ಅಲ್ಪಾಟೆಕ್ (ರಾಜಶ್ರೀ) ಕಾರ್ಖಾನೆಯ ಸೋಲಾರ್ ಗಾರ್ಡನ್ ಬಳಿಯ ಕಾಲುವೆಯಲ್ಲಿ ಎಂಜಿನಿಯರಿಂಗ್ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿದ್ದ ವಿದ್ಯಾರ್ಥಿನಿ ಭಾಗ್ಯಶ್ರೀ ಚನ್ನವೀರಪ್ಪ ಶವ ಪತ್ತೆಯಾಗಿದೆ. ವಿದ್ಯಾರ್ಥಿನಿ ಭಾಗ್ಯಶ್ರೀ ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆ ಹೊಂದಿದ್ದ ಬಳಿಕ ಬೆಂಗಳೂರಿನ ಆಕ್ಸರ್ಡ್ ಕಾಲೇಜಿನಲ್ಲಿ ಬಿ.ಇ. ಪ್ರವೇಶ ಪಡೆದಿದ್ದಳು.

ಇದು ಸಹಜ ಸಾವಲ್ಲ, ಕೊಲೆ ಎಂದು ಗೋಪಾಲ ನಾಟೆಕಾರ್ ಆರೋಪಿಸಿದ್ದಾರೆ ಆರೋಪಿಗಳನ್ನು ಪತ್ತೆ ಹಚ್ಚಿ ಕುಟುಂಬಸ್ತರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಒತ್ತಾಯ ಮಾಡಿದ್ದಾರೆ
ಸೆ.11ರಂದು ಸಂಜೆ ಭಾಗ್ಯಶ್ರೀ ನಿಗೂಡವಾಗಿ ಕಾಣೆಯಾಗಿದ್ದಳು. ಈ ಕುರಿತು ಮಳಖೇಡ ಠಾಣೆಯಲ್ಲಿ ದೂರು ನೀಡಿದ್ದಾರೆ ಬಳಿಕ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಭಾಗ್ಯಶ್ರೀ ಸಹಜ ಸಾವಲ್ಲ. ಉದ್ದೇಶಪೂರ್ವಕವಾಗಿ ಅವಳನ್ನು ಕೊಲೆ ಮಾಡಲಾಗಿದೆ ಎಂದು ಗೋಪಾಲ ನಾಟೆಕಾರ್ ವಕೀಲರು ಹಾಗೂ ತಾಲೂಕ ಅಧ್ಯಕ್ಷರು ಅಂಬೇಡ್ಕರ್ ಯುವ ಸೇನೆ ಸೇಡಂ ರವರು ಆರೋಪಿಸಿದ್ದಾರೆ. ಆರೋಪಿಯನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




