ಮುದ್ದೇಬಿಹಾಳ: ಮನೆಯ ಮುಂದೆ ಆಟವಾಡುತ್ತಿದ್ದ ಮೂರುವರೆ ವರ್ಷದ ಬಾಲಕನೋರ್ವ ತೆರೆದ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಮೇ.10ರ ಶನಿವಾರ ಬೆಳಕಿಗೆ ಬಂದಿದೆ.
ಮೂರುವರೆ ವರ್ಷದ ಬಾಲಕ ಹರ್ಷಿತ್ ಬಸವರಾಜ ಪಾಟೀಲ ಮೃತಪಟ್ಟವನು. ಮನೆ ಬಳಿ ಇರುವ ನಾಗಪ್ಪನ ಕಟ್ಟೆಯ ಸಮೀಪ ತೆರೆದ ಬಾವಿಗೆ ಬಿದ್ದಿದನು.
ಶುಕ್ರವಾರ ಸಂಜೆಯಿಂದಲೇ ಬಾಲಕ ಕಾಣೆಯಾಗಿದ್ದು, ಎಲ್ಲೆಡ ಹುಡುಕಿದರೂ ಸಿಕ್ಕಿರಲಿಲ್ಲ. ಸಂಶಯ ಬಂದು ಅಗ್ನಿಶಾಮಕ ಸಿಬ್ಬಂದಿ ಕರೆಸಿ ಬಾವಿಯಲ್ಲಿ ಇಳಿದು ಹುಡುಕಾಡಿದಾಗ ಶವ ಪತ್ತೆಯಾಗಿದೆ. ಸಾವಿನ ಸುದ್ದಿ ತಿಳಿದು ಕಾರ್ಯ ನಿಮಿತ್ತ ಗೋವಾದಲ್ಲಿದ್ದ ತಂದೆ ಬಸವರಾಜ ಧಾವಿಸಿದ್ದಾರೆ.
ಕುಟುಂಬ ಮಾತ್ರವಲ್ಲದೇ ಇಡೀ ಬಡಾವಣೆಯಲ್ಲಿ ನೀರವ ಮೌನ ಆವರಿಸಿದೆ. ಮೃತ ಬಾಲಕನಿಗೆ ಇನ್ನೋರ್ವ ಕಿರಿಯ ಸಹೋದರ ಇದ್ದಾನೆ. ಘಟನೆ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪುಕರಣ ದಾಖಲಾಗಿದೆ.