ನಿಪ್ಪಾಣಿ : ಕೇಂದ್ರೀಯ ಗ್ರಹ ಸಚಿವ ಅಮಿತ್ ಶಹಾರವರು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕುರಿತು ಅವಮಾನಸ್ಪದ ವಕ್ತವ್ಯ ಮಾಡಿದ್ದನ್ನು ಖಂಡಿಸಿ ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದ ಬೌದ್ಧ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು. ಬೆಳಗ್ಗೆ ಬೌದ್ದ ಸಮಾಜ ಬಾಂಧವರು ಆಧಿಕ ಸಂಖ್ಯೆಯಲ್ಲಿ ಅಂಬೇಡ್ಕರ್ ಚೌಕದಲ್ಲಿ ಸೇರಿ ಮೆರವಣಿಗೆ ಮೂಲಕ ವಾಲ್ಮೀಕಿ ನಗರ,ದಸರಾ ಚೌಕ, ಬಾಜಾರ ಪೇಟೆ,ಸುತಾರ ಗಲ್ಲಿ,ಸಿದ್ದೇಶ್ವರ ಮಂದಿರ,ಹಳೇ ಬಸ್ ನಿಲ್ದಾಣ ಮುಖಾಂತರ ಅಂಬೇಡಕರ್ ಚೌಕ ಆಗಮಿಸಿದಾಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಾನಂದ ಬಿಜಲೇ ಅಬೇಡ್ಕರರಿಗೆ ಮಾಲಾರ್ಪಣೆ ಮಾಡಿದರು.
ಅಲ್ಲಿಂದ ಶಾಂತಿನಗರ ಸರ್ಕಲ್ ಗೆ ಆಗಮಿಸಿದಾಗ ಪ್ರತಿಭಟನೆಕಾರರು ಮಾನವ ಸರಪಳಿ ನಿರ್ಮಿಸಿ ಅಮಿತ್ ಶಾ ವಿರುದ್ದ ಘೋಷಣೆ ಕೂಗಿದರು. ಇದೇ ಸಂದರ್ಭದಲ್ಲಿ ದಲಿತ ಹಾಗೂ ಬೌದ್ಧ ಸಮಾಜದ ವತಿಯಿಂದ ಸಹಾಯಕ ತಹಸೀಲ್ದಾರ್ ಎಸ್.ಎ. ಹಜರೆ ಅವರಿಗೆ ಮನವಿ ಸಲ್ಲಿಸಿದರು.ಪಿಡಿಓ ಪ್ರಕಾಶ ಧನಗರ್, ಸೆಕ್ರೆಟರಿ ಸನದಿ,ಗ್ರಾಮ ಪಂಚಾಯಿತಿ ಯ ಸದಸ್ಯರು, ದಲಿತ ಮುಖಂಡರು,ಸಂಘರ್ಷ ಸಮಿತಿಯ ಮಹಿಳಾ ಸದಸ್ಯರು ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸಭೆಯನ್ನು ಉದ್ದೇಶಿಸಿ ಡಿ.ಎನ್. ದಾಭಾಡೆ,ದೀಪಾ ಜಾಧವ, ಜಯಶ್ರೀ ಜಾಧವ, ರೈತ ಸಂಘದ ಕಾರ್ಯದರ್ಶಿ ತಾತ್ಯಾಸಾಹೇಬ ಕೇಸ್ತೆ,ಪ್ರಮೋದ ಪಾಟೀಲ ಜೀವನ ಯಾದವ ಮಾತನಾಡಿ ಅಮಿತ್ ಷಾ ಕ್ಷಮೆಯಾಚಿಸಬೇಕು ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಹೊರ ಹಾಕಬೇಕೆಂದು ಘೋಷಣೆ ಕೂಗುತ್ತಾ ಡಾಕ್ಟರ ಬಾಬಾಸಾಹೇಬ್ ಅವರಿಗೆ ಮಾಡಿದ ಅಪಮಾನ ಸಹಿಸುವುದಿಲ್ಲ. ಅಂಬೇಡ್ಕರ್ ವಿರೋಧಿಗಳ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದೆಂದರು ಸದಲಗಾ ಪೊಲೀಸ್ ಠಾಣೆಯ ಪಿಎಸ್ಐ ಶಿವಕುಮಾರ್ ಬಿರಾದಾರ ಸಹಾಯಕ ಪುಂಡಲೀಕ ಲಮಾಣಿ ಬಂದೋಬಸ್ತ್ ಕೈಗೊಂಡಿದ್ದರು.
ವರದಿ : ಮಹಾವೀರ ಚಿಂಚಣೆ.