ಬೆಂಗಳೂರು : ಕರ್ನಾಟಕದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು (ಏಪ್ರಿಲ್ 9) ಮತದಾನ ಪ್ರಕ್ರಿಯೆ ಆರಂಭಗೊಂಡಿದೆ.
ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಈ ಸ್ಥಾನಗಳಿಗಾಗಿ ಇಂದು ಬಿಗ್ ಫೈಟ್ ನಡೆಯುತ್ತಿದೆ.
ಪ್ರತಿಷ್ಠೆಯ ಕಣ: ಆಡಳಿತಾರೂಢ ಕಾಂಗ್ರೆಸ್‌ಗೆ ಈ ಎರಡೂ ಕ್ಷೇತ್ರಗಳನ್ನು ಉಳಿಸಿಕೊಳ್ಳುವುದು ಪ್ರತಿಷ್ಠೆಯ ಪ್ರಶ್ನೆಯಾದರೆ, ಬಿಜೆಪಿ ಈ ಬಾರಿ ಕೈ ಕೋಟೆಗೆ ಲಗ್ಗೆ ಇಡಲು ಭರ್ಜರಿ ತಂತ್ರ ರೂಪಿಸಿದೆ.
ಅಭ್ಯರ್ಥಿಗಳ ವಿವರ:
ದಾವಣಗೆರೆ ದಕ್ಷಿಣ: ಸಮರ್ಥ್ ಶಾಮನೂರು ಮಲ್ಲಿಕಾರ್ಜುನ್ (ಕಾಂಗ್ರೆಸ್) vs ಶ್ರೀನಿವಾಸ್ ಟಿ. ದಾಸಕರಿಯಪ್ಪ (ಬಿಜೆಪಿ).
ಬಾಗಲಕೋಟೆ: ಉಮೇಶ್ ಮೇಟಿ (ಕಾಂಗ್ರೆಸ್) vs ವೀರಣ್ಣ ಚರಂತಿಮಠ (ಬಿಜೆಪಿ).
ಮತದಾನ ವಿವರ – ಬಾಗಲಕೋಟೆ – ದಾವಣಗೆರೆ ದಕ್ಷಿಣ
ಮತಗಟ್ಟೆಗಳ ಸಂಖ್ಯೆ – 322 – 284
ಸಿಬ್ಬಂದಿ – 2500 – 1,489
ಕಣದಲ್ಲಿರುವ ಅಭ್ಯರ್ಥಿಗಳು – 9 – 25
ಒಟ್ಟು ಮತದಾರರು – 2,59,797 – 2,31,072
ಪುರುಷರು – 1,26,999 – 1,13,399
ಮಹಿಳೆಯರು – 1,32,775 – 1,17,690
ಬಿಸಿಲ ಬೇಗೆಯಲ್ಲೂ ಮತದಾನಕ್ಕೆ ಸಕಲ ಸಿದ್ಧತೆ
ಬೇಸಿಗೆಯ ಸುಡು ಬಿಸಿಲಿರುವುದರಿಂದ ಮತದಾರರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ವಿಶೇಷ ಮುನ್ನೆಚ್ಚರಿಕೆಗಳನ್ನು ವಹಿಸಿದೆ:
ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ.
ಪ್ರತಿಯೊಂದು ಮತಗಟ್ಟೆಯಲ್ಲಿ ಕುಡಿಯುವ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡಲಾಗಿದೆ.
ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗಾಗಿ ಉಚಿತ ವಾಹನ ಸೌಲಭ್ಯ ಒದಗಿಸಲಾಗಿದೆ.




