ಪಾವಗಡ: ಪಟ್ಟಣದ ತುಮಕೂರು ರಸ್ತೆಯ ಹೊರವಲಯದ ಕಣಿವೆನಹಳ್ಳಿ ಗೇಟ್ ಬಳಿ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ಒಬ್ಬ ವ್ಯಕ್ತಿ ಮೃತಪಟ್ಟು ಮತ್ತೊಬ್ಬ ವ್ಯಕ್ತಿಗೆ ತೀವ್ರ ಗಾಯವಾಗಿರುವ ಘಟನೆ ಬುಧವಾರ ಸಂಜೆ ಸಂಭವಿಸಿದೆ.
ಆಂಧ್ರಪ್ರದೇಶದ ಮಡಕಶಿರಾ ತಾಲೂಕಿನಆರ್. ಅನಂತಪುರ ಗ್ರಾಮದ ನಿವಾಸಿ ಗೋಪಾಲಪ್ಪ (50 )ಮೃತರಾಗಿದ್ದು, ಅದೇ ಗ್ರಾಮದ ನರಸಿಂಹಮೂರ್ತಿ (46)ಗೆ ತೀವ್ರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನರಸಿಂಹಮೂರ್ತಿಯವರ ಮಗ ತಾಲೂಕಿನ ಕಡಪಲಕೆರೆ ಗ್ರಾಮದಲ್ಲಿ ಗ್ರಾಮದಲ್ಲಿ ವಾಸವಿದ್ದುಮಗನನ್ನು ನೋಡಿಕೊಂಡು ಕಡಪಲಕೆರೆಯಿಂದ ಮಡಕಶಿರಾಗೆ ಹೋಗುವ ವೇಳೆ ರಸ್ತೆ ಅಪಘಾತ ಸಂಭವಿಸಿದೆ.ಸ್ಥಳಕ್ಕೆ ಪಾವಗಡ ಠಾಣೆಯ ಸಿ. ಐ ಸುರೇಶ್ ಮತ್ತು ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ ಕೇಸ್ ದಾಖಲಿಸಿಕೊಂಡಿದ್ದಾರೆ.
ವರದಿ:ಶಿವಾನಂದ




