ವಿಜಯಪುರ : ಬಸವನ ಬಾಗೇವಾಡಿ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಇಂದು ಶ್ರೀ ಪ ಗು ಹಳಕಟ್ಟಿ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಇದೇ ಸಮಯದಲ್ಲಿ ತಹಶೀಲ್ದಾರ್ರಾದ ಶ್ರೀ. Y. S. ಸೋಮನಕಟ್ಟಿ ಅವರು ಮತ್ತು ಊರಿನ ಮುಖಂಡರು ಸೇರಿಕೊಂಡು ಪ ಗು ಹಳಕಟ್ಟಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿಯನ್ನು ಆಚರಿಸಲಾಯಿತು.
ಇದೇ ಸಮಯದಲ್ಲಿ ಮಾತನಾಡಿದ Y. S. ಸೋಮನ ಕಟ್ಟಿ ಅವರು ಪ ಗು ಹಳಕಟ್ಟಿ ಅವರ ಕುರಿತು ಸವಿಸ್ತಾರವಾಗಿ ಮಾತನಾಡಿದರು.
ಅತಿಥಿಗಳ ಆಗಿ ಆಗಮಿಸಿದ ಶ್ರೀ. M. G. ಆದಿಗೊಂಡ. ಕೆ ಬಿ ಕಡೆಮನಿ ಸರ್ ಹಾಗೂ ಶ್ರೀ ಕಲ್ಯಾಣ ಶೆಟ್ಟಿ ಅವರು ಪ ಗು ಹಳಕಟ್ಟಿ ಅವರ ಬಗ್ಗೆ ವಚನಗಳು ಸಂಗ್ರಹ ಮಾಡಿದ ಕುರಿತು ಮಾತನಾಡಿದರು.
ಇದೇ ಸಮಯದಲ್ಲಿ S. K. ಸೋಮನಕಟ್ಟಿ ಶಿವಾನಂದ್ ಮಂಗಾನಗರ ಶ್ರೀಶೈಲ ಶಿರಗುಪ್ಪಿ ಶ್ರೀ ಬೆಕಿನಾಳ. ಶ್ರೀ ಅಂಕದ ಸುರೇಶ್ ಗೌಡರು ಪಾಟೀಲ್ ನಿವೃತ್ತ ನೌಕರರ ಸಂಘದ ಅನೇಕ ಹಿರಿಯರು ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿಗಳು ಸಮಾಜದ ವಿವಿಧ ಮುಖಂಡರು ಉಪಸ್ಥಿತರಿದ್ದರು.




