ಬೆಂಗಳೂರು: ಕನ್ನಡಿಗರ ಕರ್ನಾಟಕ ಅದರನ್ನೊಳಗೊಂಡ ಭಾರತ ಜಗತ್ತು ನನ್ನವರಂತೆ ಎಂದು ಭಾವಿಸುವ ಜಗತ್ತು ಶಾಂತಿಯ ತೋಟವಾಗಿರಲಿ ಎಂದು ಕಲಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಶಿವರಾಜ್ ಅಂಡಗಿ ತೆಂಗಳಿ ಹೇಳಿದರು.
ಅವರು ಶ್ರೀ ಮಲ್ಲಿಕಾರ್ಜುನ ತರುಣ ಸಂಘದ ೨೭ನೇ ವಾರ್ಷಿಕೋತ್ಸವ, ಗಣೇಶೋತ್ಸವ ಮತ್ತು ‘ನಾಡಗೀತೆ ಶತಮಾನೋತ್ಸವ’ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಶಿವರಾಜ್ ಅಂಡಗಿ ತೆಂಗಳಿ ಅವರು ತಮ್ಮ ಮಧುರ ಕಂಠದಿಂದ ನಾಡಗೀತೆ ಹಾಡುವ ಮೂಲಕ ಚಾಲನೆ ನೀಡಿದರು.

ರಾಷ್ಟ್ರ ಕವಿ ಕುವೆಂಪು ಭಾರತವನ್ನು ತಾಯಿಯಂತೆ, ಕನ್ನಡ ನಾಡು ಮುದ್ದು ಮಗಳಂತೆ ಕಲ್ಪಿಸಿ ಭಾರತ ಮಾತೆ ಕರ್ನಾಟಕ ಮಾತೆಗೆ ಜಯವಾಗಲಿ ಎಂದು ಇಡೀ ಗೀತೆಯನ್ನು ಕರ್ನಾಟಕ ಮಾತೆ ಭುವನೇಶ್ವರಿ ಹಿರಿಮೆ ಎಂದು ರಾಷ್ಟ ಕವಿ ಕುವೆಂಪು ಅವರ ಪ್ರೇರಣೆಯನ್ನು ರಾಷ್ಟ್ರದ ಪೀಳಿಗೆಗೆ ಲಭಿಸಲಿ ಎಂದು ಶಿವರಾಜ್ ಅಂಡಗಿ ತೆಂಗಳಿ ಶ್ಲಾಘನೀಯ ಎಂದರು.
ಜೇರಟಗಿ ಪೂಜ್ಯ ಶ್ರೀಗಳಾದ ಮಹಾಂತ ಮಹಾಸ್ವಾಮಿಗಳು ಜಗನ್ಮಾತೆ ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು,
ಮಲ್ಲಿನಾಥ ದೇಶಮುಖ ರಾಷ್ಟ್ರ ಕವಿ ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು,
ಈ ಸಂದರ್ಭದಲ್ಲಿ ವಿರೇಶ ನಾಗಶೆಟ್ಟಿ, ಕರಣ ಆಂದೋಲ, ಶಶಿಧರ ಪ್ಯಾಟಿ, ಶಿವರಾಜ ಕೋಳಕೂರ ಸೇರಿದಂತೆ ಮುಂತಾದವರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್




