ಚಾಮರಾಜನಗರ: ನೂತನವಾಗಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ವಕ್ಫ್ ಮಸೂದೆಯನ್ನು ವಿರೋಧಿಸಲು ಕಾನೂನಾತ್ಮಕ ಹೊರಾಟ ನಡೆಸಲು ಉದ್ದೇಶಿಸಿ ಇಂದು ನಗರದ ಮದೀನ ಮಸೀದಿಯಲ್ಲಿ ಜಿಲ್ಲೆಯ ಎಲ್ಲಾ ಮಸೀದಿಗಳ ಆಡಳಿತ ಮಂಡಳಿಯ ಸದಸ್ಯರನ್ನು ಒಗ್ಗೊಡಿ ಸಲಹೆ ಸೂಚನೆಗಳನ್ನು ಪಡೆಯ ಲಾಯಿತು.
ಇಂದು ನಡೆದ ಸಮಾಲೋಚನೆ ಸಭೆ ಮುಫ್ತಿ ಜಾಫರ್ ಹುಸೇನ್ ಖಾಸಿಮಿ ನೇತ್ರತ್ವದಲ್ಲಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಆದೇಶದ ಮೆರೆಗೆ ಹಮ್ಮಿ ಕೊಳ್ಳಲಾಯಿತು.
ಸಭೆಯಲ್ಲಿ ನೂತನವಾಗಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ವಕ್ಫ್ ಮಸೂದೆ ನಿರಾಕರಣೆ ಮಾಡುವ ನಿಟ್ಟಿನಲ್ಲಿ ಕಾನೂನಾತ್ಮಕ ಹೊರಾಟ ನಡೆಸಲು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನಿರ್ದೇಶನದಂತೆ ಜಿಲ್ಲೆಯಾದ್ಯಂತ ಎಲ್ಲ ಮಸೀದಿ ಮುಖಂಡರನ್ನು ಸಜ್ಜಾಗಲು ನಿರ್ದೇಶನ ನೀಡಲಾಯಿತು.
ಪ್ರತಿ ಶುಕ್ರವಾರ ವಿಶೇಷ ಪ್ರಾರ್ಥನೆ ಸಂದರ್ಭದಲ್ಲಿ ಪ್ರತಿಯೊಬ್ಬರು ಕಪ್ಪು ಪಟ್ಟಿಧರಿಸಿ ವಿರೊಧ ವ್ಯಕ್ತಪಡಿಸಬೇಕು ಎಂದು ತೀರ್ಮಾನಿಸಲಾಯಿತು.
ಕೇಂದ್ರ ಸರ್ಕಾರದ ದಬ್ಬಾಳಿಕೆಯ ವಿರುದ್ದ ಮೌನ ಪ್ರತಿಭಟನೆ ನಡೆಸಲು ಸಜ್ಜಾಗಬೇಕು ಹಾಗೂ ಕಾನೂನಾತ್ಮಕ ಹೊರಾಟ ನಡೆಸಬೇಕು ಎಂದು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಹಾಫಿಜ್ ಲತೀಫುರ್ ರೆಹಮಾನ್. ಮೌಲಾನ ಖಾದರ್ ಹುಸೇನ್. ಮೌಲಾನ ಇಕ್ಬಾಲ್ ಅಹ್ಮದ್. ಹಾಫಿಜ್ ಮುಕ್ತಾರ್ ಅಹ್ಮದ್. ಮೌಲಾನ ಮಹಮ್ಮದ್ ಇಸ್ಮಾಯಿಲ್. ಚೂಡ ಅಧ್ಯಕ್ಷ ಮಹಮ್ಮದ್ ಅಸ್ಗರ್ ಉ ಮುನ್ನ. ಮಸೀದಿ ಅಧ್ಯಕ್ಷ ನಯೀಮುಲ್ ಹಕ್. ಕಾರ್ಯದರ್ಶಿ ವಸೀಮ್ ಪಾಷ. ಸದಸ್ಯರು ಎಂ ಕಬೀರ್. ಸೈಯದ್ ಫುರ್ಖಾನ್. ಖಲೀಲ್ ಅಹಮದ್. ಸರ್ದಾರ್ ಬೇಗ್. ನಗರ ಸಭೆ ಸದಸ್ಯ ಅಬ್ರಾರ್ ಅಹ್ಮದ್. ಖಲೀಲ್ ಉಲ್ಲಾ. ಸೇರಿದಂತೆ ಇನ್ನೀತರರು ಮಸೀದಿ ಮುಖಂಡರುಗಳು ಹಾಗೂ ಸಂಘಟನೆಗಳ ಮುಖಂಡರು ಭಾಗಿಯಾಗಿದ್ದರು.
ವರದಿ: ಸ್ವಾಮಿ ಬಳೇಪೇಟೆ