ನವದೆಹಲಿ : 2021ರಿಂದ ನಡೆಯುತ್ತಿರುವ ಸ್ವಚ್ಛತಾ ಅಭಿಯಾನದ ಮೂಲಕ ಗುಜರಿ ವಸ್ತುಗಳನ್ನು ಮಾರಾಟ ಮಾಡಿದ ಕೇಂದ್ರ ಸರ್ಕಾರ 2,364 ಕೋಟಿ ರೂಪಾಯಿಗಳನ್ನು ಗಳಿಸಿದೆ.
ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.ಅಕ್ಟೋಬರ್ 1ರಿಂದ 31ರವರೆಗೂ ಸರ್ಕಾರ ನಾಲ್ಕನೇ ವಿಶೇಷ ಸ್ವಚ್ಛತಾ ಅಭಿಯಾನ ಕೈಗೊಂಡಿತು. ವಿಲೇವಾರಿಯಿಂದಾಗಿ ಸರ್ಕಾರಿ ಕಚೇರಿಗಳೂ ಸ್ವಚ್ಛಗೊಂಡಿವೆ, ಸರ್ಕಾರಕ್ಕೂ ಆದಾಯ ಸಿಕ್ಕಂತಾಗಿದೆ.
2023 ರಲ್ಲಿ 2.59 ಲಕ್ಷ ಸ್ಥಳಗಳಿಗೆ ಹೋಲಿಸಿದರೆ 2024ರಲ್ಲಿ 5.97 ಲಕ್ಷ ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗಿತ್ತು. ಸಾಕಷ್ಟು ಕಾಲದಿಂದ ಅನಗತ್ಯವಾಗಿ ಬಿದ್ದಿದ್ದ ಗುಜರಿಗಳನ್ನು ಮಾರಲಾಗಿದೆ. ಇದರಿಂದ ಸರ್ಕಾರಿ ಕಚೇರಿಗಳಲ್ಲಿನ 190 ಚದರಡಿಯ ಜಾಗ ಕ್ಲಿಯರ್ ಆದಂತಾಗಿದೆ ಎಂದರು.