Ad imageAd image

ಕೂಡಲೇ ಗೌತಮ್ ಅದಾನಿಯನ್ನು ಕೇಂದ್ರ ಸರ್ಕಾರ ಬಂಧಿಸಬೇಕು : ಖರ್ಗೆ 

Bharath Vaibhav
ಕೂಡಲೇ ಗೌತಮ್ ಅದಾನಿಯನ್ನು ಕೇಂದ್ರ ಸರ್ಕಾರ ಬಂಧಿಸಬೇಕು : ಖರ್ಗೆ 
mallikarjun kharge
WhatsApp Group Join Now
Telegram Group Join Now

ನವದೆಹಲಿ: ಗೌತಮ್ ಅದಾನಿಯನ್ನು ಕೂಡಲೇ ಕೇಂದ್ರ ಸರ್ಕಾರ ಬಂಧನ ಮಾಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು.

ಅದಾನಿ ವಿರುದ್ಧ ಯುಎಸ್ ಕೋರ್ಟ್‌ನಿಂದ ವಾರೆಂಟ್ ಜಾರಿ ವಿಚಾರವಾಗಿ ಮಾತನಾಡಿದ ಅವರು, ಕೇಂದ್ರ ಸರ್ಕಾರ, ಪ್ರಧಾನಿ ಮೋದಿ, ಅಮಿತ್ ಶಾ ಅದಾನಿಯನ್ನು ರಕ್ಷಣೆ ಮಾಡುತ್ತಿದ್ದಾರೆ.

ಈ ವಿಚಾರವನ್ನು ನಾವು ಸಂಸತ್ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ. ಅದಾನಿ ಕಾನೂನು ಬಾಹಿರ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಭ್ರಷ್ಟಾಚಾರ ಕೇಸ್‌ಲ್ಲಿ ಭಾಗಿಯಾಗಿದ್ದಾರೆ ಎಂದು ಅನೇಕ ವರ್ಷಗಳಿಂದ ಹೇಳುತ್ತಿದ್ದೇವೆ. ಇಷ್ಟೆಲ್ಲಾ ಇದ್ದರೂ ಮೋದಿ ಸ್ವಲ್ವವೂ ಬಗ್ಗೆ ಮಾತನಾಡಲ್ಲ. ಅಮಿತ್ ಶಾ ಕಡೆ ಇಡಿ ಇದೆ. ಸಿಬಿಐ ಇದೆ. ಯಾಕೆ ತನಿಖೆ ಮಾಡುತ್ತಿಲ್ಲ ಎಂದು ಎಂದು ಪ್ರಶ್ನಿಸಿದರು.

ಹಿಂಡೆನ್‌ಬರ್ಗ್ ಸಂಶೋಧನಾ ವರದಿ ಪ್ರಕಟಿಸಿದಾಗ ಇದೆಲ್ಲ ಸುಳ್ಳು ಅಂದರು. ಈಗ ವಿದೇಶದಲ್ಲಿ ಅಕ್ರಮದ ಬಗ್ಗೆ ಚರ್ಚೆ ಆಗುತ್ತಿದೆ. ನಮ್ಮ ದೇಶದ ಆಸ್ತಿಯನ್ನು ಅದಾನಿಗೆ ಕೊಡುತ್ತಿದ್ದಾರೆ. ಏರ್ಪೋರ್ಟ್, ಪೋರ್ಟ್, ಜಮೀನು ಸೇರಿ ಎಲ್ಲಾ ಅದಾನಿಗೆ ಕೊಡುತ್ತಿದ್ದಾರೆ.

ಅವರು ನ್ಯಾಯವಾಗಿ ಮಾಡಿಕೊಂಡರೆ ಪರವಾಗಿಲ್ಲ. ಒಬ್ಬನಿಗೆ ಶ್ರೀಮಂತ ಮಾಡಲು ಹೀಗೆ ಅಕ್ರಮ ಮಾಡುತ್ತಿದ್ದಾರೆ. ಇದಕ್ಕಾಗಿ ಅದಾನಿ ಕೇಂದ್ರ ಸರ್ಕಾರಕ್ಕೆ, ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಗುಡುಗಿದರು.

ನಾವು ಯಾವತ್ತು ಟಾಟಾ, ಬಿರ್ಲಾ ಹೆಸರು ಹೇಳಿಲ್ಲ. ದಿಢೀರ್ ಕೋಟ್ಯಧಿಪತಿ ಆಗಬೇಕು, ಮಿಲಿಯನೇರ್, ಬಿಲಿಯನೇರ್ ಆಗಲು ಹೊರಟಿದ್ದಾರೆ. ಅಕ್ರಮದ ಬಗ್ಗೆ ತನಿಖೆ ಆಗಬೇಕು. ಅದಾನಿ ಬಂಧನ ಮಾಡಬೇಕು ಎಂದು ಆಗ್ರಹಿಸುತ್ತೇವೆ ಎಂದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!