Ad imageAd image

ಅತಿ ಉದ್ದ ಎಳೆಯುವ ರಥ ಎಂಬ ಹೆಗ್ಗಳಿಕೆಗೆ ಪಾತ್ರವಾದ ರಥ

Bharath Vaibhav
ಅತಿ ಉದ್ದ ಎಳೆಯುವ ರಥ ಎಂಬ ಹೆಗ್ಗಳಿಕೆಗೆ ಪಾತ್ರವಾದ ರಥ
WhatsApp Group Join Now
Telegram Group Join Now

ಅಥಣಿ: 

ದೇಶದಲ್ಲೇ ಅತಿ ಉದ್ದ ಎಳೆಯುವ ರಥ ಎಂಬ ಹೆಗ್ಗಳಿಕೆಗೆ ಪಾತ್ರವಾದ ರಥ.

ಸುಮಾರು 2ಕಿಲೋಮೀಟರ್ ಉದ್ದ ಇಳೆಯುವ ರಥವಾಗಿದೆ.

ಅಥಣಿ : ತಾಲ್ಲೂಕಿನ ಸುಕ್ಷೇತ್ರ ಹಲ್ಯಾಳ ಗ್ರಾಮದ ವೀರಕ್ತಮಠ ಎಂದು ಹೇಳಬಹುದು. ಭಕ್ತರಿಂದ ಶ್ರೀ ಗುರುಸಿದ್ಧ ಶಿವಯೋಗಿಗಳವರ ಭವ್ಯ ರಥೋತ್ಸವ. 45ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ 15ದಿನಗಳ ಕಾಲ ಆದ್ಯಾತ್ಮಕ ನುಡಿಗಳಿಂದ ಗ್ರಾಮದ ಜನರ ಮನಸ್ಸುನ್ನ ಶುದ್ದಿಗೊಳಿಸಲಾಯಿತು. ಭವ್ಯ ರಥೋತ್ಸವವನ್ನು ಸುತ್ತಮುತ್ತಲಿನ ಗ್ರಾಮಗಳು ಸೇರಿ ಅತಿವ ವಿಜೃಂಭಣೆಯಿಂದ ಆಚರಿಸುವ ದೃಶ್ಯ. ಈ ಕಾರ್ಯಕ್ರಮಕ್ಕೆ 15ಮಠಾದೀಶರು ಬಂದು ಮೆರಗು ಗೊಳಿಸಿದರು. ಭಕ್ತರು ದೀಪ ಪ್ರಜ್ವಲಿಸುವ ಮೂಲಕ ಆದ್ಯಾತ್ಮಕ ನುಡಿಗಳಿಗೆ ಕೊನೆ ಹೇಳಿದರು. ಕುಂಭ ಮೇಳ ನೋಡೋಕೆ ಅಂದ ಚಂದ ಅಂತ ಹೇಳಬಹುದು.

ಮಹಿಳೆಯರೆಲ್ಲರೂ ಮಡಿ ಸ್ನಾನ ಮಾಡಿ ಕೃಷ್ಣಾ ನದಿಯಿಂದ ನೀರು ತಲೆಮೇಲೆ ಹೊತ್ತು ತಂದು ಊರಿನ ಪ್ರಮುಖ ಬಿದಿಗಳಲ್ಲಿ ಸುತ್ತುವುದು ನಯನಕ್ಕೆ ಮನೋಹರವಾಗಿದೆ. ಇನ್ನು ಮದ್ಯಾಹ್ನದ ಅನ್ನ ಪ್ರಸಾದ ದೃಶ್ಯ ನೋಡಿದರೆ ಅದ್ಭುತ ಅದ್ಭುತ ಎನಿಸುವುದು. ಇನ್ನು ಸಾಯಂಕಾಲದ ರಥದ ವೈಭವ ನೋಡೋಕೆ ಎರಡು ನಯನಗಳು ಸಾಲದು.

ರಥೋತ್ಸವದ ಉದ್ದಕ್ಕೂ ಉತ್ತತ್ತಿ, ಬಾಳೆಹಣ್ಣು, ಬೆಲ್ಲದ ಉಂಡೆ ಪುಷ್ಪ ಮತ್ತು ಮಂಡಕ್ಕಿಯನ್ನು ಹಾರಿಸುತ್ತ ಸಹಸ್ರಾರು ಜನ ಸಾಗಿದರು. 2ಕಿಮಿ ವರೆಗೂ ಉದ್ದ ಎಳೆಯುವ ರಥಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!