ಬೆಳಗಾವಿ: ಶಾಲೆಯಲ್ಲಿದ್ದ ಬ್ಯಾಗ್ ತಗೆದುಕೊಂಡು ಬರುವಂತೆ ಸಹಪಾಠಿಗಳು ಹೇಳಿದ್ದ ಮಾತನ್ನು ಕೇಳದಿದ್ದಕ್ಕೇ ವಿದ್ಯಾರ್ಥಿಗೆ ಚಾಕುವಿನಿಂದ ಇರಿದಿರುವಂತ ಘಟನೆ ಜಿಲ್ಲೆಯ ಗೋಕಾಕ್ ನಲ್ಲಿ ನಡೆದಿದೆ.
ಗೋಕಾಕ್ ನಗರ ವಾಲ್ಮೀಕಿ ಮೈದಾನದಲ್ಲಿ ಶಾಲೆ ಬಿಟ್ಟಾಗ ತನ್ನ ಬ್ಯಾಗ್ ತರುವಂತೆ 10ನೇ ಕ್ಲಾಸ್ ವಿದ್ಯಾರ್ಥಿಗೆ ಸಹಪಾಠಿಗಳು ತಿಳಿಸಿದ್ದರು. ಆದರೇ ಶಾಲೆ ಬಿಟ್ಟ ನಂತರ ಸಹಪಾಠಿಗಳು ಹೇಳಿದಂತೆ ಬ್ಯಾಗ್ ತರೋದಕ್ಕೆ ನಿರಾಕರಿಸಿ ತಂದಿರಲಿಲ್ಲ.
ಇದೇ ಕಾರಣಕ್ಕೆ ಮೈದಾನದಲ್ಲಿ ಜಗಳಕ್ಕೆ ಇಳಿದಂತ ಅಪ್ರಾಪ್ತ ಬಾಲಕರು, ವಿದ್ಯಾರ್ಥಿಯ ಮೇಲೆ ಚಾಕುವಿನಿಂದ ಇರಿದಿದ್ದಾರೆ. ಕುತ್ತಿಗೆ, ಮೈಮೇಲೆ ಚಾಕು ಇರಿದು ಸಹಪಾಠಿಗಳು ಪರಾರಿಯಾಗಿದ್ದಾರೆ.
ಚಾಕು ಇರಿತಕ್ಕೆ ಒಳಗಾಗಿದ್ದಂತ 10ನೇ ತರಗತಿ ವಿದ್ಯಾರ್ಥಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.