ಪಾಕಿಸ್ತಾನದ ಜೊತೆ ಯುದ್ಧ ಮಾಡುವ ಅಗತ್ಯವಿಲ್ಲ ಎಂಬ ಹೇಳಿಕೆ ನೀಡಿ ಭಾರಿ ವಿವಾದಕ್ಕೆ ಸಿಲುಕಿದ್ದರು ಸಿದ್ದರಾಮಯ್ಯ ಇಂದು ಭಾರತವು ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ ಮೂಲಕ ಪ್ರತ್ಯುತ್ತರ ನೀಡಿದೆ. ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ ಅವರು ಹಣೆಯಲ್ಲಿ ಕುಂಕುಮ ಇಟ್ಟುಕೊಂಡೇ ಸುದ್ದಿಗೋಷ್ಠಿ ನಡೆಸಿ ಗಮನ ಸೆಳೆದಿದ್ದಾರೆ.
ಇದೇ ವಿಚಾರವಾಗಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕೂಡ ವ್ಯಂಗ್ಯವಾಡಿದ್ದಾರೆ. ಆಪರೇಷನ್ ಸಿಂಧೂರ ಯಶಸ್ವಿಯಾಗುತ್ತಿದ್ದಂತೆ, ಸಿಎಂ ಸಿದ್ದರಾಮಯ್ಯ ಅವರ ಹಣೆಯಲ್ಲಿ ಸಿಂಧೂರ ಎಂದು ಟಾಂಗ್ ನೀಡಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯ ಅವರು ಕುಂಕುಮ ಹಚ್ಚಿಕೊಳ್ಳಲು ನಿರಾಕರಿಸಿದ್ದರು ಎಂದು ಬಿಜೆಪಿ ದೂರಿತ್ತು. ಆದರೆ ಇಂದು ಸಿಂಧೂರ ಆಪರೇಷನ್ ಯಶಸ್ವಿ ಬಗ್ಗೆ ಸುದ್ದಿಗೋಷ್ಠಿಗೆ ಅವರು ಹಣೆಗೆ ಕುಂಕುಮ ಇಟ್ಟು ಬಂದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಈ ಬಗ್ಗೆ ಕುಂಕುಮ ಕಂಡರೆ ಭಯಪಡುತ್ತಿದ್ದವರಿಗೆ ಈಗ ಭಕ್ತಿ ಬಂದಿದೆ ಅಂದರೆ ಇದಕ್ಕಿಂತ ಅಚ್ಚೆ ದಿನ್ ಬೇಕಾ? ಎಂದು ಅಶೋಕ್ ಸಿಎಂಗೆ ಲೇವಡಿ ಮಾಡಿದ್ದಾರೆ.




