ಢಾಕಾ: ಮೈದಾನದಲ್ಲೇ ಕ್ರಿಕೆಟ್ ತಂಡವೊಂದರ ಕೋಚ್ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ.
ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ನಲ್ಲಿ ಈ ಘಟನೆ ನಡೆದಿದ್ದು, ಬಿಪಿಎಲ್ (ಬಾಂಗ್ಲಾದೇಶ ಪ್ರೀಮಿಯರ್ ಲೀಗ್) ಪಂದ್ಯದ ವೇಳೆ ಢಾಕಾ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಮಹಬೂಬ್ ಅಲಿ ಜಾಕಿ ಹೃದಯಾಘಾತದಿಂದ ಮೈದಾನದಲ್ಲಿ ನಿಧನರಾಗಿದ್ದಾರೆ.
ಢಾಕಾ ಕ್ಯಾಪಿಟಲ್ಸ್ vs ರಾಜ್‌ಶಾಹಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಈ ದುರಂತ ಸಂಭವಿಸಿದ್ದು, ಪಂದ್ಯ ಪ್ರಾರಂಭವಾಗುವ ಮೊದಲು ಜಾಕಿ ಅಸ್ವಸ್ಥರಾದರು.



