Ad imageAd image

ಪುಷ್ಪಾರ್ಚನೆಯಿಂದ ವಿದ್ಯಾರ್ಥಿಗಳ ಸ್ವಾಗತಿಸಿದ ಕಾಲೇಜು ಆಡಳಿತ ಮಂಡಳಿ

Bharath Vaibhav
WhatsApp Group Join Now
Telegram Group Join Now

ಸಿರುಗುಪ್ಪ : -ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 2024-25ನೇ ಸಾಲಿನ ಶೈಕ್ಷಣ ಕ ವರ್ಷ ಪ್ರಾರಂಭದ ನಿಮಿತ್ತ ಕಾಲೇಜು ಆಡಳಿತ ಮಂಡಳಿಯಿಂದ ಜೂನ್.1, ಶನಿವಾರದಂದು ಪುಷ್ಪಾರ್ಚಣೆ ಮಾಡಿ ವಿದ್ಯಾರ್ಥಿಗಳನ್ನು ತರಗತಿಗಳಿಗೆ ಸ್ವಾಗತ ಮಾಡಿಕೊಳ್ಳಲಾಯಿತು.

ಕಾಲೇಜಿನ ಪ್ರಾಚಾರ್ಯರಾದ ಹೆಚ್.ನಾಗರಾಜ ಅವರು ಮಾತನಾಡಿ ಪ್ರಸಕ್ತ ಸಾಲಿನಿಂದ ಆದರ್ಶ ವಿಜ್ಞಾನ ಕಾಲೇಜ್ ಆಗಿ ಸರ್ಕಾರದಿಂದ ಉನ್ನತೀಕರಿಸಲಾಗಿದ್ದು, ಪ್ರಯೋಗಾಲಯಗಳು, ಉಚಿತ ಕೋಚಿಂಗ್, ಆನ್‌ಲೈನ್ ಕೋಚಿಂಗ್ ನೀಡಲಾಗುತ್ತಿದೆ.

ಸದ್ಯ ನಮ್ಮ ಕಾಲೇಜಿನಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ಅದರೊಂದಿಗೆ ಕೌಶಲ್ಯಾಧಾರಿತ ಐ.ಟಿ ಮತ್ತು ಆಟೋ ಮೊಬೈಲ್ ಕೋರ್ಸ್ ಗಳಿಗೆ ನಮ್ಮ ಕಾಲೇಜಿನಲ್ಲಿ ದಾಖಲಾತಿ ಲಭ್ಯವಿರುತ್ತದೆ. ಕಳೆದ ಸಲ ಖಾಸಗಿ ಕಾಲೇಜಿಗಿಂತಲೂ ಉತ್ತಮ ಪಲಿತಾಂಶವನ್ನು ನಮ್ಮ ವಿದ್ಯಾರ್ಥಿಗಳು ಪಡೆದಿರುತ್ತಾರೆ.

ಖಾಸಗಿ ಕಾಲೇಜಿಗಿಂತಲೂ ಉತ್ತಮ ಅನುಭವವುಳ್ಳ ಉಪನ್ಯಾಸಕರು ಸರ್ಕಾರಿ ಕಾಲೇಜಿನಲ್ಲಿದ್ದು ಉತ್ತಮ ಗುಣಮಟ್ಟದ ಶಿಕ್ಷಣವು ಸಿಗಲಿದೆ. ನಮ್ಮಲ್ಲಿ ವಿಜ್ಞಾನ ವಿಭಾಗದ ಜೊತೆ ಕಂಪ್ಯೂಟರ್ ವಿಜ್ಞಾನ ವಿಭಾಗ ಕೋರ್ಸಿಗೂ ದಾಖಲೆ ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ ಮಕ್ಕಳ ಉಜ್ವಲ ಭವಿಷ್ಯಕ್ಕೆ ಪೋಷಕರು ತಮ್ಮ ಮಕ್ಕಳನ್ನು ದಾಖಲಾತಿ ಮಾಡಿಸಬೇಕೆಂದರು.

ಇದೇ ವೇಳೆ ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷ ಆರ್. ಸದಾಶಿವಪ್ಪ, ಉಪನ್ಯಾಸಕರಾದ ಸೋಮಶೇಖರರೆಡ್ಡಿ, ಹರಿಪ್ರಸಾದ್, ಮಲ್ಲಿಕಾರ್ಜುನ, ಅತಿಥಿ ಉಪನ್ಯಾಸಕರಾದ ಚಿದಾನಂದಪ್ಪ, ನಾಗರಾಜ, ದೇವರಾಜ, ಸೈಯದ್ ಅಬಿದ, ಕಾಂತಣ್ಣ ಹಾಗೂ ವಿದ್ಯಾರ್ಥಿಗಳು ಇದ್ದರು.

ವರದಿ:-ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
Share This Article
error: Content is protected !!