Ad imageAd image

‘ಸಮುದಾಯ ಭವನವನ್ನು ಸದ್ಭಳಕೆ ಮಾಡಿಕೊಳ್ಳಬೇಕು’

Bharath Vaibhav
‘ಸಮುದಾಯ ಭವನವನ್ನು ಸದ್ಭಳಕೆ ಮಾಡಿಕೊಳ್ಳಬೇಕು’
WhatsApp Group Join Now
Telegram Group Join Now

ಗೋಕಾಕ್ :  ಸಾಮಾಜಿಕ ಕಾರ್ಯಕ್ರಮಗಳಿಗಾಗಿ ಸಮುದಾಯ ಭವನವನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಸಮೀಪದ ಅರಭಾವಿ ಪಟ್ಟಣದ ಬಡಿಗೇರ ಓಣಿಯಲ್ಲಿ ನೂತನವಾಗಿ ನಿರ್ಮಿಸಿರುವ ಬಸವೇಶ್ವರ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು.

ಅರಭಾವಿಯಲ್ಲಿ ನಿರ್ಮಾಣವಾಗಿರುವ ಸಮುದಾಯ ಭವನಕ್ಕೆ ಹಣಕಾಸು ನೆರವನ್ನು ಕಲ್ಪಿಸಿಕೊಟ್ಟಿದ್ದೇವೆ. ಅದನ್ನು ಸದ್ಭಳಕೆ ಮಾಡಿಕೊಂಡು ಭವನವನ್ನು ಸರಳತೆಯಿಂದ ನಿರ್ಮಾಣ ಮಾಡಿದ್ದಾರೆ. ಇದು ಸಾರ್ವಜನಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಅರಭಾವಿ ಪಟ್ಟಣದ ಸಾರ್ವಜನಿಕರು ಶಾಸಕರನ್ನು ಸತ್ಕರಿಸಿದರು. ವೇಮೂ ಶಿವಯ್ಯ ಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ವೇದಿಕೆಯಲ್ಲಿ ಮಲ್ಲಿಕಾರ್ಜುನ ಸ್ವಾಮಿಗಳು, ಜಿಲ್ಲಾ ಗ್ರಾಮೀಣ ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ, ಮುಖಂಡರಾದ ಶಂಕರ ಬಿಲಕುಂದಿ, ಮುತ್ತೆಪ್ಪ ಜಲ್ಲಿ, ನಿಂಗಪ್ಪ ಇಳಗೇರಿ, ಬಸವರಾಜ ಮಾಳೇದವರ, ಭೀಮಪ್ಪ ಹಳ್ಳೂರ, ಅಶೋಕ ಅಂಗಡಿ, ರಮೇಶ ಮಾದರ, ಅಂದಾನೆಪ್ಪ ಕಡಗದ, ಶಂಕರ ಕಂಬಾರ, ಡಾ. ಎಸ್.ಎಸ್. ಕಲ್ಲೊಳಿ, ಸಂಜು ಮಾದರ, ವಿಶ್ವನಾಥ ಹೊಸಮನಿ, ಸತ್ತೆಪ್ಪ ಬಡಾಯಿ, ಸುನಿಲ ಜಮಖಂಡಿ, ರಮೇಶ ಬಿಲಕುಂದಿ,
ಮಹಾದೇವ ಗುಡಿತೋಟ, ಚಂದ್ರಪ್ಪ ಘೀವಾರಿ, ಕಾಡಯ್ಯ ದಡ್ಡಿ, ರಾಯಪ್ಪ ಕಡ್ಡಿ, ಸಿದ್ದಪ್ಪ ಬಡಿಗೇರ, ರಿಯಾಜ ಯಾದವಾಡ, ಸಾತಪ್ಪ ಜೈನ, ಸದಾಶಿವ ಬಬಲೇಶ್ವರ, ಪರಶುರಾಮ ಸನ್ನಾಪಣಿ, ಅಶೋಕ ಪೂಜೇರಿ, ಇಸ್ಮಾಯಿಲ್ ಸರಕಾವಸ, ಸಪಟ್ಟಣ ಪಂಚಾಯತ ಸದಸ್ಯರು, ವಿವಿಧ ಸಮುದಾಯಗಳ ಮುಖಂಡರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!