ಬೆಳಗಾವಿ: ಬೆಳಗಾವಿಯಲ್ಲಿ ಸಕಾಲಕ್ಕೆ ಚಿಕಿತ್ಸೆ ಸಿಗದೇ ಗರ್ಭದಲ್ಲಿಯೇ ಮಗು ಸಾವನ್ನಪ್ಪಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ.
ಗೋಗಾಕ್ ತಾಲೂಕಿನ ಮೇಲ್ಮಟ್ಟಿ ಗ್ರಾಮದ ರಾಧಿಕಾ ಗಡ್ಡಹೊಳಿ ಎಂಟೂವರೆ ತಿಂಗಳ ಗರ್ಭಿಣಿಯಾಗಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ರಾಧಿಕಾಳಿಗೆ ಪಿಡ್ಸ್ ಬಂದಿದ್ದು, ತಕ್ಷಣ ಯಮಕನಮರಡಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಪ್ರಾಥಮಿಕ ಚಿಕಿತ್ಸೆ ಬಳಿಕ ಬೆಳಗಾವಿ ಕೆ ಎಸ್ ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗರ್ಭಿಣಿ ಸ್ಥಿತಿ ಗಂಭೀರವಾಗಿದೆ ಮೊದಲು ಹಣ ಕಟ್ಟಿ ಚಿಕಿತ್ಸೆ ಕೊಡುತ್ತೇವೆ ಎಂದು ವೈದ್ಯರು ಹೇಳಿದ್ದರು.
ದೊಡ್ಡಮೊಟ್ಟದ ಹಣ ಕತ್ಟಲು ಆಗಲ್ಲ ಎಂದು ಮಧ್ಯರಾತ್ರಿ ಡಿಸ್ಚಾರ್ಜ್ ಮಡಿಸಿಕೊಂಡ ಕುಟುಂಬದವರು, ಗರ್ಭಿಣಿಯನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ಅಲೆಯುವ ವೇಳೆ ಮಗು ಗರ್ಭದಲ್ಲೇ ಸಾವನ್ನಪ್ಪಿದೆ. ಮಗು ಗರ್ಭದಲ್ಲೇ ಮೃತಪಟ್ಟು 6 ಗಂಟೆ ಕಳೆದಿದೆ.
ಇದೀಗ ಮಹಿಳೆ ಸ್ಥಿತಿ ಗಂಭೀರವಾಗಿದ್ದು, ಮಗುವನ್ನು ಹೊರತೆಗೆಯಲು ವೈದ್ಯರು ಹರಸಾಹಸಪಡುತ್ತಿದ್ದಾರೆ. ಮತ್ತೊಂದೆಡೆ ಮಹಿಳೆ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ. ಖಾಸಗಿ ಆಸ್ಪತ್ರೆಯ ಧನದಾಹಕ್ಕೆ ಗರ್ಭಿಣಿ ಪ್ರಾಣಕ್ಕೆ ಕುತ್ತುಬಂದಂತಾಗಿದೆ.