ಬೀದರ್: ಬಸ್ನಲ್ಲಿ ಬಿಟ್ಟುಹೋಗಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಕಂಡಕ್ಟರ್ರೊಬ್ಬರು ಮರಳಿ ಪ್ರಯಾಣಿಕನಿಗೆ ನೀಡಿದ ಘಟನೆ ಬೀದರ್ನಲ್ಲಿ ನಡೆದಿದೆ.
ಬೀದರ್ನ ಭಾಲ್ಕಿ ನಿಲ್ದಾಣದಿಂದ ಮಹಾರಾಷ್ಟ್ರದ ನಿಲಂಗಾಕ್ಕೆ ಮಹ್ಮದ್ ಅಜರ್ ಎನ್ನುವವರು ಪ್ರಯಾಣ ಆದರೆ ಮಹ್ಮದ್ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಬಸ್ಸಿನಲ್ಲಿ ಮೆರೆತು ಹೋಗಿದ್ದರು. ಚಿನ್ನಾಭರಣ ಬಸ್ಸಿನಲ್ಲಿ ಬಿಟ್ಟಿದ್ದು, ನೆನಪಾದ ಬಳಿಕ ಗಾಬರಿಗೊಂಡು ಬಸ್ ನಿಲ್ದಾಣಕ್ಕೆ ವಾಪಸಾಗಿದ್ದಾರೆ.
ಬಳಿಕ ನಿರ್ವಾಹಕ ಪ್ರಕಾಶ ಅವರು ಚಿನ್ನಾಭರಣವನ್ನು ಸುರಕ್ಷಿತವಾಗಿ ಮಹ್ಮದ್ಗೆ ತಲುಪಿಸಿದ್ದಾರೆ. ಪ್ರಕಾಶ ಪ್ರಮಾಣಿಕತೆಗೆ ಮೆಚ್ಚಿ ಪ್ರಯಾಣಿಕ ಮಹ್ಮದ್ ಹಾಗೂ ಸಾರಿಗೆ ಅಧಿಕಾರಿಗಳು ಚಾಲಕ ಹಾಗೂ ನಿರ್ವಾಹಕನನ್ನು ಸನ್ಮಾಸಿ ಗೌರವಿಸಿದ್ದಾರೆ.