ಬೆಳಗಾವಿ: ಒಂದು ನಗರದ ಅಭಿವೃದ್ಧಿಗೆ ಬಿಲ್ಡರ್ಸ್ ಕೊಡುಗೆ ಬಹಳ ಮಹತ್ವದಾಗಿರುತ್ತದೆ. ತುಂಬಾ ಜನ ಬೇರೆ ಬೇರೆ ರೀತಿಯಲ್ಲಿ ನಗರದ ಅಭಿದ್ಧಿಗೆ ಶ್ರಮಿಸುತ್ತಾರೆ ಆದರೆ ಎಲ್ಲದಕ್ಕೂ ಹೆಚ್ಚು ಬಿಲ್ಡರ್ಸ್ ಕೊಡುಗೆ ಮುಖ್ಯ ಆಗಿರುತ್ತದೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ತಿಳಿಸಿದರು.
ಗುರುವಾರ ಸಾಯಂಕಾಲ ಖಾಸಗಿ ಹೋಟಲ್ ನಲ್ಲಿ ಕ್ರಿಡಾಯಿ ಅಸೋಸೇಶಿಯನ್ ಜೊತೆಗೆ ಚುನಾವಣಾ ಪ್ರಚಾರ ಸಭೆ ನಡೆಸಿ ಮಾತನಾಡಿದ ಅವರು, ಒಂದು ನಗರದಲ್ಲಿ ಬಹಳಷ್ಟು ಜನ ಬಿಜಿನೆಸ್ ಮ್ಯಾನ್ ಇರುತ್ತಾರೆ ಆದರೆ ನಗರದ ಅಭಿವೃದ್ಧಿಗೆ ಡೆವಲಪರ್ಸ್, ಬಿಲ್ಡರ್ ಪಾತ್ರ ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.
ಈ ಹಿಂದೆ ನಾನು ಮುಖ್ಯಮಂತ್ರಿ ಇದ್ದಾಗ ಹಾಗೂ ಜೊತೆಗೆ ವಕೀಲನಾಗಿ ಕೆಲಸ ಮಾಡಿದಾಗ ಮಾಡಿದಾಗ ಸಾಕಷ್ಟು ಕಂಪನಿಗಳಿಗೆ ಲೀಗಲ್ ಅಡ್ವೈಸರ್ ಆಗಿ ಕೇಲಸ ಮಾಡಿದ್ದೇನೆ. ಡೆವಲಪರ್ಸ್, ಬಿಲ್ಡರ್ ಗೆ ಆಗುವ ಸಮಸ್ಯೆಗಳು ನನಗೆ ಗೊತ್ತಿದೆ. ಡೆವಲಪರ್ಸ್, ಬಿಲ್ಡರ್ ಗೆ ಸಮಸ್ಯೆ ಬಂದಾಗ ನನಗೆ ಆಡಳಿತಾತ್ಮಕ ಜ್ಞಾನ ಇರುವುದರಿಂದ ಯಾವುದೆ ಸಮಸ್ಯೆ ಇದ್ದರು ನಿವಾರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಹಿಂದೆ ನಾನು ಯಾವುದೆ ಸಮಸ್ಯೆ ಇದ್ದರು ಅದಕ್ಕೆ ಪರಿಹಾರ ನೀಡುವ ಕೆಲಸ ಮಾಡಿದ್ದೇನೆ. ಕ್ರೀಡಾಯಿ ಹುಬ್ಬಳಿ ಅಸೋಸೇಶಿಯನ್ ಇಂದು ನನಗೆ ನೆನಪು ಮಾಡಿಕೊಳ್ಳುತ್ತಾರೆ. ಇವತ್ತಿನ ವ್ಯವಸ್ಥೆಯಲ್ಲಿ ಕಾನುನು ಚೌಕಟ್ಟಿನಲ್ಲಿ ಕೆಲಸ ಮಾಡುವರಿಗೆ ತೊಂದರೆ ಜಾಸ್ತಿ. ನಾನು ಈ ಹಿಂದೆ ಶಾಸಕ ಇದ್ದಾಗ ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೆಲಸ ಮಾಡಿದಾಗ ಎಲ್ಲರಿಗೂ ಸಲಹೆ ನೀಡಿದ್ದೇನೆ. ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುವರನ್ನು ತೊಂದರೆ ಮಾಡದಂತೆ ಅಧಿಕಾರಿಗಳಿಗೆ ಸಲಹ ಸೂಚನೆ ನೀಡುತ್ತಿದ್ದೆ. ಈ ಕುರಿತು ಸ್ಥಳಿಯ ಅಧಿಕಾರಿಗಳ ಜೊತೆ ಹಾಗೂ ರಾಜ್ಯ ಮಟ್ಟದ ಐಎಎಸ್ ಅಧಿಕಾರಿಗಳಿಗೂ ಸಲಹೆ ನೀಡಿದ್ದೇನೆ. ಹಾಗಾಗಿ ಬೆಳಗಾವಿಯಲ್ಲಿ ಕೂಡಾ ಯಾವುದೇ ಸಮಸ್ಯೆ ಆದರೂ ನಿಮ್ಮ ಜೊತೆಗೆ ಇದ್ದು ಕೆಲಸ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಲೋಕಸಭಾ ಸದಸ್ಯ ಆಗುವ ಅವಕಾಶ ನನಗೆ ಈಗ ಬಂದಿದೆ. ಆ ಅವಕಾಶವನ್ನು ಭಾರತೀಯ ಜನತಾ ಪಕ್ಷ ಕೊಟ್ಟಿದೆ. 400 ಸಿಟು ಗೆಲ್ಲುವ ಮೂಲಕ ನರೇಂದ್ರ ಮೋದಿಯವರು ಮೂರನೆ ಸಲ ಪ್ರಧಾನಿ ಆಗುತ್ತಾರೆ ಎಂದು ತಿಳಿಸಿದರು .
ಈ ವೇಳೆ ಅಧ್ಯಕ್ಷ ದೀಪಕ ಗೋಜಗೆಕರ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಅನಿಲ ಬೆನಕೆ, ಆರ್ ಎಸ್ ಮುತಾಲಿಕ, ಯುವರಾಜ್, ಪಾಲಿಕೆ ಸದಸ್ಯ ಜವಳಕರ್ , ಪಂಚಾಕ್ಷರಿ ಹಿರೇಮಠ, ರಾಜೇಂದ್ರ ಮುತಗೆಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವರದಿ:ಪ್ರತೀಕ ಚಿಟಗಿ