ಮೊಳಕಾಲ್ಮುರು : ಭಾರತ ದೇಶದಲ್ಲಿ ಅನೇಕ ಜಾತಿಗಳುಂಟು ಆದರೆ ಎಲ್ಲಾ ಜಾತಿ ಜನಾಂಗವನ್ನು ಒಗ್ಗೂಡಿಸುವ ಕಾರ್ಯ ಎನ್ನುವುದಾದರೆ ಅದು ಬಸವಣ್ಣನ ತತ್ವದಿಂದ ಎಂದು ಹೇಳಬೇಕಾಗುತ್ತದೆ ಎಂದು ಅರಣ್ಯ ಸಚಿವರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯಧರ್ಶಿಗಳಾದ ಈಶ್ವರ ಬಿ ಖಂಡ್ರೆ ರವರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ತಾಲೂಕಿನ ರಾಂಪುರ ಗ್ರಾಮದಲ್ಲಿ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವೀರ ವೀರಶೈವ ಲಿಂಗಾಯತ ಬೃಹತ್ ಸಮಾವೇಶ ಹಾಗೂ ಸೇವಾ ದೀಕ್ಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಸವಾದಿ ಶಿವಶರಣರು ನುಡಿದಂತೆ ಮಾನವ ಧರ್ಮವೇ ಶ್ರೇಷ್ಠ ಧರ್ಮ, ವೀರಶೈವ ಲಿಂಗಾಯಿತರಿಗೆ ಜನರಿಗೆ ಬಸವತತ್ವವೇ ಮೂಲ ಹಾಗೂ ಆಧರ್ಶ. ಸಮಾಜದ ಪ್ರತಿಯೊಂದು ಜಾತಿ ಜನಾಂಗವನ್ನು ಒಂದು ಸುವ್ಯವಸ್ಥಿತ ರೀತಿಯಲ್ಲಿ ನೋಡಿಕೊಳ್ಳುವ ಸಮಾಜ ಎಂದರೆ ಅದು ವೀರಶೈವ ಸಮಾಜ ಇಂತಹ. ಬಸವಣ್ಣರವರ ತತ್ವದಲ್ಲಿ 770 ಶಿವಶರಣರ ಆದರ್ಶ ಮಾರ್ಗದಲ್ಲಿ ರಚನೆಯಾದ ವಚನ ಗ್ರಂಥವೇ ಅದ್ಭುತವಾದದ್ದು. ಅನೇಕ ಜನರಿಗೆ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಶಿಕ್ಷಣ ಮುಖ್ಯ. ಇಲ್ಲಿ ನಡೆಯುವಂತ ಈ ಸಮಾವೇಶ ಬಹಳ ದೊಡ್ಡ ಮಟ್ಟಕ್ಕೆ ಆಯೋಜನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಮಟ್ಟಕ್ಕೆ ಇಂತಹ ಸಮಾವೇಶಗಳು ನಡೆಯಲಿ. ಸಮಾಜದ ಕಟ್ಟ ಕಡೆ ವ್ಯಕ್ತಿಯು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಬಳಸಿಕೊಂಡು ಅವರು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂದು ನಮ್ಮ ಸಂಕಲ್ಪವಾಗಿದೆ ಅಂತಹ ವ್ಯವಸ್ಥೆಯನ್ನು ನಾವು ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಜಾತಿ ಜನರಿಗೂ ಕೊಡಲು ನಾವು ಇಷ್ಟಪಡುತ್ತೇವೆ ಸಮಾಜದ ಪ್ರತಿಯೊಬ್ಬ ವ್ಯಕ್ತಿ ಬಳಸಿಕೊಳ್ಳಿ. ವೀರಶೈವ ಸಮಾಜದ ಪ್ರತಿಯೊಬ್ಬರು ಅಭಿವೃದ್ಧಿ ಹೊಂದಲು ಸರಕಾರದಿಂದ ಸಿಗುವ ಸೌಲತ್ತನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಸಂಸದರಾದ ಗೋವಿಂದ ಎಂ ಕಾರಜೋಳ ಮಾತನಾಡಿ ಸಮಾಜದಲ್ಲಿ ಹೆಣ್ಣು ಗಂಡು ಒಂದು ಬಿಟ್ಟರೆ ಬೇರೆ ಜಾತಿನೇ ಇಲ್ಲ 12ನೇ ಶತಮಾನದಲ್ಲಿ ಬಸವಣ್ಣನವರ 770 ಗಣಗಳ ಶಿವಶರಣರ ರಚನೆಯ ವಚನ ಗ್ರಂಥವೇ ಪವಿತ್ರವಾದದ್ದು ಜನರು ಮಾಡಿದ ಈ ಅನುಭವ ಮಂಟಪದಲ್ಲಿ ಎಲ್ಲರೂ ಬಸವ ತತ್ವಕ್ಕೆ ಆದರಿತರಾಗಿದ್ದೇವೆ. ಸಮಾಜದಲ್ಲಿ ಅದೇನಾದರೂ ಬದಲಾವಣೆ ಆಗುತ್ತದೆ ಅಂದರೆ ಅದಕ್ಕೆ ಬಸವ ತತ್ವವೇ ಮೂಲ ಕಾರಣ ಬಸವ ತತ್ವದಿಂದ ಮಾತ್ರ ಪ್ರಪಂಚದಲ್ಲಿ ಒಂದು ಸಮ ಸಮಾಜ ಹಾಗೂ ಆರ್ಥಿಕ ಸದೃಢವಾದ ಭಾರತ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಬಸವಣ್ಣನವರ ಆಧರ್ಶಗಳಿಂದ ಮಾತ್ರ ಮಾನವ ಧರ್ಮ ಉಳಿಯಲು ಸಾಧ್ಯ. ನಾನು ಕನ್ನಡ ಮತ್ತು ಸಂಸ್ಕೃತಿ ಮಂತ್ರಿ ಆದಾಗ ವಚನಗಳನ್ನು ಪ್ರಿಂಟ್ ಮಾಡಿಸಿ ಪ್ರಚಾರ ಮಾಡಿದ್ದೇನೆ. ಆದರೆ 21ನೇ ಶತಮಾನದಲ್ಲಿ ಉಪಜಾತಿಯಾಗಿ ವಿಂಗಡಣೆಯಾಯಿತು, ಉಪಜಾತಿಯಿಂದ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಈಗಿರುವಾಗ ಜಾತಿ ಜಾತಿ ಎಂದರೆ ಬಸವಣ್ಣ ತತ್ವಕ್ಕೆ ಅರ್ಥವಿಲ್ಲ. ನಮ್ಮ ಸಮಾಜದಲ್ಲಿ ಅಭಿವೃದ್ಧಿ ಹೊಂದಲು ಜಾತಿ ಸಮಾಜ ಬಿಟ್ಟು ನಾವೆಲ್ಲಾ ಒಂದೇ ಎನ್ನುವ ಭಾವನೆ ಇದ್ದರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಎನ್ ವೈ ಗೋಪಾಲಕೃಷ್ಣ ವಿನಯ್ ಕುಲಕರ್ಣಿ ಶಾಸಕರು ಮತ್ತು ಉಪಾಧ್ಯಕ್ಷರು ವೀರಶೈವ ಮಹಾಸಭಾ , ಕೆಎಸ್ ನವೀನ್ ಕುಮಾರ್ ವಿಧಾನ ಪರಿಷತ್ ಸದಸ್ಯರು ಎಂ ಡಿ ಮಂಜುನಾಥ್ ತಾಲೂಕು ಅಧ್ಯಕ್ಷರು ಇನ್ನು ಹಲವರು ಸಮಾವೇಶದ ಬಗ್ಗೆ ವಿಸ್ತಾರವಾಗಿ ತಮ್ಮ ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಕಾರ್ಯಕ್ರಮದ ನಂತರ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಎಲ್ಲಾ ಪ್ರತಿನಿಧಿಗಳಿಗೆ ಸಚಿವರು ವಿಧಿ ವಿಧಾನವನ್ನು ಬೋಧಿಸಿದರು. ಅದೇ ರೀತಿ ಕೆಲವರಿಗೆ ಸನ್ಮಾನಿಸಲಾಯಿತು.
ಸಂದರ್ಭದಲ್ಲಿ ಕಾಪು ರಾಮಚಂದ್ರರೆಡ್ಡಿ ರಾಯದುರ್ಗಂ ಶಾಸಕರು, ಶ್ರೀನಿವಾಸ್ ರೆಡ್ಡಿ ರಾಜ್ಯ ಉಪಾಧ್ಯಕ್ಷರು ಹಾಗೂ ಉಸ್ತುವಾರಿಗಳು ಅಖಿಲ ಕರ್ನಾಟಕ ಭಾರತ ವೀರಶೈವ ಮಹಾಸಭಾ ಮಹಡಿ ಶಿವಮೂರ್ತಿ ಜಿಲ್ಲಾಧ್ಯಕ್ಷರು ಮನೋಹರ್ ಅಬ್ಬಿಗೆರೆ ರಾಜ್ಯಾಧ್ಯಕ್ಷರು ಸಿದ್ದಾಪುರ ಬ್ರಹ್ಮಗಿರಿ ಬೆಟ್ಟ ಸೋಮಶ್ವರ ಸ್ವಾಮಿ, ವೀರಭದ್ರಯ್ಯ ರುದ್ರಾಕ್ಷಿ ಮಠ ರಾಂಪುರ, ಚನ್ನ ವೀರ ಸ್ವಾಮಿ, ರೇಣುಕಾ ಸ್ವಾಮಿ, ಎಂ ಡಿ ಮಂಜುನಾಥ್ ಡಿ ಕೆ ಆರ್ ಮಾಲೀಕರು, ಹೆಚ್ ಟಿ ನಾಗಿರೆಡ್ಡಿ ರೇವಣ್ಣ ತಾಳಕೆರಪ್ಪ ಬಾಳೆಕಾಯಿ ರಾಮದಾಸ್, ರೂಪ ವಿನಯ್ ಕುಮಾರ್, ಎಂ ಎನ್ ವಿಜಯ ಲಕ್ಷ್ಮಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷರು ಮುಕ್ತಾoಬಾ. ಆರ್ ಜಿ ಗಂಗಾಧರ್, ಟಿ ರವಿಕುಮಾರ್ ಮಾಜಿ ಪ ಪ ಅಧ್ಯಕ್ಷರು ಹಾಗೂ ಅಖಿಲ ಭಾರತ ವೀರಶೈವ ಮಾಹಾಸಭಾ ಜಿಲ್ಲಾ ಮತ್ತು ತಾಲೂಕು ಮತ್ತು ವಿವಿಧ ಸಂಘಟನೆಯ ಸದಸ್ಯರು ಹಾಗೂ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ಸಿಎಂ ಗಂಗಾಧರ




