ಐಗಳಿ: ಅಥಣಿ ತಾಲೂಕಿನ ಹಾಲಳ್ಳಿ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಬಸಪ್ಪ ದಶವಂತ ಐಗಳಿಗೆ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ೧೧ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ತೀರ್ಪ ನೀಡಿದೆ. ಐಗಳಿ ಪೊಲೀಸ್ ಠಾಣೆ ಹದ್ದಿನಲ್ಲಿ ಬರುವ ಹಾಲಳ್ಳಿ ಗ್ರಾಮದಲ್ಲಿ ಕೃಷಿ ಜಮೀನಿನ ಸೀಮೆ ವಿಷಯವಾಗಿ ಮೃತ ಶಿವಲಿಂಗಪ್ಪ ಮುರಗೇಪ್ಪ ಐಗಳಿ ಮತ್ತು ಅಪರಾಧಿ ಕುಟುಂಬದವರ ನಡುವೆ ಆಗಾಗಾ ಜಗಳ ನಡೆಯುತ್ತಿತ್ತು.೨೦೨೧ ಜುಲೈ ೧೯ ರಂದು ಗ್ರಾಮದ ಸರ್ಕಾರಿ ಶಾಲೆಯ ಕಟ್ಟೆ ಮೇಲೆ ಶಿವಲಿಂಗಪ್ಪ ಮಲಗಿದ್ದಾಗ ಬಸಪ್ಪ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆ ಮಾಡಿದ್ದ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಸಿಪಿಐ ಶಂಕರಗೌಡ ಬಸಗೌಡರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು . ಈ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶ ಈರಣ್ಣ ಈ ಎಸ್ ತೀರ್ಪ ನೀಡಿದ್ದಾರೆ. ದಂಡದ ಮೊತ್ತ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ ಒಂದು ವರ್ಷ ಸಾದಾ ಕಾರಾಗೃಹ ವಾಸ ನೀಡಲು ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕ ಅಮೀನಸಾಬ್ ಕಲಾದಗಿ ವಾದ ಮಂಡಿಸಿದ್ದರು.




