ಶಬರಿಮಲೆ: ಮಕರ ಸಂಕ್ರಾಂತಿಯ ದಿನದಂದು ಪ್ರತಿ ವರ್ಷದಂತೆ ಈ ವರ್ಷವೂ ಶಬರಿಮಲೆಯಲ್ಲಿ ಮಕರ ಜ್ಯೋತಿಯ ದರ್ಶನವಾಯಿತು. ಜ್ಯೋತಿಯನ್ನು ಕಂಡಂತ ಅಯ್ಯಪ್ಪ ಭಕ್ತಗಣವು ಭಾವ ಪರವಶತೆಯಲ್ಲಿ ಮುಳುಗಿದರು.
ಸಂಜೆ ಸುಮಾರು 6.30ರಿಂದ 6.45ರ ನಡುವೆ ಗೋಚರಿಸಿದಂತ ಮಕರ ಜ್ಯೋತಿಯನ್ನು ಕಂಡಂತ ಅಯ್ಯಪ್ಪ ಸ್ವಾಮಿ ಭಕ್ತರು ಭಕ್ತಿ ಭಾವದಲ್ಲಿ ಮಿಂದೆದ್ದರು.
ಶಬರಿ ಮಲೆ ಬೆಟ್ಟದಲ್ಲಿ ಸಂಕ್ರಾಂತಿಯಂದು ಪ್ರತಿ ವರ್ಷ ನಡೆಯುವ ವಿಶೇಷ ಪೂಜೆಗೆ ಶಬರಿಮಲೆ ಮಕರವಿಳಕ್ಕು ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ.
ಮಕರ ಸಂಕ್ರಮಣದ ಕಾಲದಲ್ಲಿಯೇ ಶಬರಿಮಲೆ ಮಕರ ವಿಳಕ್ಕು ಪೂಜೆಗಳು ನಡೆಯುವುದರಿಂದ ಇದರಿಂದ ಮಕರ ಜ್ಯೋತಿ ಎಂಬ ಹೆಸರಿನಿಂದಲೂ ಗುರುತಿಸಲಾಗುತ್ತದೆ.




