ಹಾವೇರಿ :ಜಿಲ್ಲೆಯ ಸವಣೂರು ತಾಲ್ಲೂಕಿನ ನದಿ ನಿರಲಗಿ ಗ್ರಾಮದ ಪುಟ್ಟ ವಿದ್ಯಾರ್ಥಿನಿ ಮಂಜುಳಾ ಪ್ರಕಾಶ್ ಹರಿಜನ 17 ವರ್ಷದ ವಿದ್ಯಾರ್ಥಿಯ ಮೃತ ದೇಹ ಪತ್ತೆಯಾಗಿದ್ದು ಎಲ್ಲರಿಗು ಈ ವಿಷಯ ಅನುಮಾನವಾಗಿದೆ.
ಈ ವಿದ್ಯಾರ್ಥಿನಿ ಹುಬ್ಬಳ್ಳಿಯ ಸರಕಾರಿ ಪಾಲಿಟೆಕ್ನಿಕ್ ಹುಬ್ಬಳ್ಳಿ ಕಾಲೇಜ್ ಒಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ ಇವಳ ಮೃತ ದೇಹ ಗುರುವಾರ ಸವಣೂರು ತಾಲೂಕಿನ ಅರಳಿಹಳ್ಳಿ ಗ್ರಾಮದ ವರದಾ ನದಿ ದಂಡೆಯ ಮೇಲೆ ಕಂಡು ಬಂದಿದ್ದು ಎಲ್ಲರಿಗು ಆತಂಕ ಉಂಟು ಮಾಡುತ್ತಿದೆ ಈ ವಿದ್ಯಾರ್ಥಿನಿ ಸಾವಿಗೆ ಸೂಕ್ತ ನ್ಯಾಯ ಸಿಗಬೇಕು ಈ ಸಾವಿನ ರಹಸ್ಯವನ್ನು ತನಿಖೆ ಮುಖಾಂತರ ತಿಳಿಸಿ ಕೊಡಬೇಕು. ಅವಳ ಕುಟುಂಬ್ಬಕ್ಕೆ ನ್ಯಾಯ ಸಿಗಬೇಕು. ಈ ವಿಷಯದ ಬಗ್ಗೆ ಪೊಲೀಸ ಇಲಾಖೆ ಗಂಭೀರವಾಗಿ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಈ ಪ್ರಕರಣದ ತನಿಖೆಯಲ್ಲಿ ಪೊಲೀಸ್ ಅಧಿಕಾರಿಗಳು ಬೇಜವಾಬ್ದಾರಿ ತೋರಿದಲ್ಲಿ ಎಸ್ ಪಿ ಕಛೇರಿಯ ಮುಂದೆ
ನಮ್ಮ ಸಮಾಜದ ವತಿಯಿಂದ ಧರಣಿ ಕುಳಿತುಕೊಳ್ಳುತ್ತೇವೆ ಎಂದು ಲಿಡ್ಕರ್ ಮಾಜಿ ಅಧ್ಯಕ್ಷರಾದ ಡಿ ಎಸ್ ಮಾಳಗಿಯವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಹೇಳಿದ್ದಾರೆ. ಇಂತ ಘಟನೆಗಳು ಪದೇ ಪದೇ ಕಂಡು ಬರುತ್ತಿದ್ದರು ನಮ್ಮ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಏಕೆ.
ಈ ಸಾವಿನ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಆ ಕುಟುಂಬಕ್ಕೆ ನ್ಯಾಯ ಒದಗಿಸಬೇಕು.
ವರದಿ : ರಮೇಶ್ ತಾಳಿಕೋಟಿ