Ad imageAd image

ಪ್ರಯಾಗರಾಜಗೆ ಹೋಗಿ ಮರಳಿ ಬರುವಾಗ ಭೀಕರ ಅಪಘಾತ ಗೋಕಾಕದ 6 ಜನರ ಸಾವು

Bharath Vaibhav
ಪ್ರಯಾಗರಾಜಗೆ ಹೋಗಿ ಮರಳಿ ಬರುವಾಗ ಭೀಕರ ಅಪಘಾತ ಗೋಕಾಕದ 6 ಜನರ ಸಾವು
WhatsApp Group Join Now
Telegram Group Join Now

ಗೋಕಾಕ : ಪ್ರಯಾಗರಾಜಗೆ ತೆರಳಿ ಮರಳಿ ಬರುವಾಗ 7 ಜನ ಪ್ರಯಾಣಿಕರಲ್ಲಿ 6 ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಬೆಳಗಾವಿ ಜಿಲ್ಲೆಯ ಗೋಕಾಕ ನಿವಾಸಿಗಳು ಎಂದು ತಿಳಿದು ಬಂದಿದೆ.

ಮಧ್ಯಪ್ರದೇಶದ ಜಬಲ್ಪುರನ ಜಿಲ್ಲೆಯ ಶಿಸೊಳಿ ಗ್ರಾಮದಲ್ಲಿ ಖಿತೌಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದೆ. ಬೆಳಗಿನ ಜಾವ 5 ಗಂಟೆಗೆ ಅಪಘಾತ ನಡೆದಿದೆ ಎಂದು ತಿಳಿದು ಬಂದಿದೆ.

KA49 M5054 ಸಂಖ್ಯೆಯ ಕ್ರೂಸರ್ ವಾಹನದಲ್ಲಿ ಒಟ್ಟು 8 ಜನ ಪ್ರಯಾಣ ಬೆಳೆಸಿದ್ದರು,KSRTC ಬೆಳಗಾವಿ ಡ್ರೈವರಾಗಿದ್ದ ಬಸವರಾಜ ಶಿವಪ್ಪ ದೊಡಮನಿ, ಗುಳೆದಗುಡ್ಡದ ಇವರ ಅಳಿಯ ಈರಣ್ಣಾ ಶೆಬನಕಟ್ಟಿ ,ವಿರೂಪಾಕ್ಷಿ ಚನ್ನಪ್ಪ ಗುಮತಿ, ಬಾಲಚಂದ್ರ ನಾರಾಯಣ ಗೌಡರ, ಬಸವರಾಜ ನಿರುಪಾದೆಪ್ಪ ಕುರಟ್ಟಿ, ಸುನೀಲ ಶೆಡಚಾಳೆ ಚಾಲಕ ಮುಸ್ತಾಕ ಎನ್ನಲಾಗಿದ್ದು ಅವರ ಪೈಕಿ ಆರು ಜನ ತೀರಿ ಹೊಗಿದ್ದಾರೆ.ತೀವ್ರವಾಗಿ ಗಾಯಗೊಂಡ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾದ ಪರಿಣಾಮ ವಾಹನ ಪಲ್ಟಿಯಾಗಿ ಅವಘಡ ಸಂಭವಿಸಿದೆ. ಗಾಯಗೊಂಡ ಇಬ್ಬರನ್ನು ಜಬಲ್ಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಸುದ್ದಿ ತಿಳಿದ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ,. ಜಬಲ್ಪುರ ಜಿಲ್ಲಾ ಪೊಲೀಸರೊಂದಿಗೆ ಬೆಳಗಾವಿ ಜಿಲ್ಲಾ ಪೊಲೀಸರು ನಿರಂತರ ಸಂಪರ್ಕದಲ್ಲಿದ್ದು ಮೃತದೇಹಗಳನ್ನು ಸ್ವಗ್ರಾಮಕ್ಕೆ ತರಲು ಜಿಲ್ಲಾಡಳಿತ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ವರದಿ: ಮನೋಹರ ಮೇಗೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!