ಅಧಣಿ: ಬಡಚಿ ಗ್ರಾಮದಿಂದ ಅಧಣಿ ಗೆ ಸೆಂಟ್ರಿಂಗ್ ಕೆಲಸಕ್ಕೆ ಎಂದು ಹೋಗಿರುವ ಯುವಕ ಸಾವನ್ನುಪ್ಪಿರುವ ಘಟನೆ ಅಧಣಿ ತಾಲೂಕಿನಲ್ಲಿ ನಡೆದಿದೆ
ಅನಿಲ್ ನಂದಿವಾಲೆ ಬಡಚಿ ಗ್ರಾಮದ ಯುವಕ 24 ವಯಸ್ಸಿನ ಯುವಕನ ಸಾವನಪ್ಪಿದ್ದಾರೆ.
ಅನಿಲ್ ನಂದೇವಾಲಿ ಯುವಕನ ಮದುವೆಯಾಗಿ ಎರಡು ಚಿಕ್ಕ ಚಿಕ್ಕ ಮಕ್ಕಳು ಇದ್ದಾರೆ.
ಅಥಣಿಯಿಂದ ಬಡಚಿ ಗ್ರಾಮಕ್ಕೆ ತೆರಳುವಾಗ ಅಥಣಿ ವಿಜಯಪುರ ರಾಜ್ಯ ಹೆದ್ದಾರಿ ಮಾರ್ಗದಲ್ಲಿ ಎಸ್ ಆರ್ ಪೆಟ್ರೋಲ್ ಪಂಪ್ ಬಳಿ ಬೈಕ್ ಬ್ಯಾಲೆನ್ಸ್ ತಪ್ಪಿದ ಕಾರಣ ಅನಿಲ್ ನಂದೇವಾಲಿ ಸ್ಥಳದಲ್ಲಿ ಸಾವನಪ್ಪಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ಅನಿಲ್ ನಂದೇವಾಲಿ ಸಾವನ್ನು ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಅಜಯ್ ಕಾಂಬಳೆ