Ad imageAd image

ಮಹಾರಾಷ್ಟ್ರದ ಮಹಾನ್‌ ವಿದ್ವಾಂಸ ದಾಜಿ ಪನ್ಶಿಕರ್ ನಿಧನ

Bharath Vaibhav
ಮಹಾರಾಷ್ಟ್ರದ ಮಹಾನ್‌ ವಿದ್ವಾಂಸ ದಾಜಿ ಪನ್ಶಿಕರ್ ನಿಧನ
WhatsApp Group Join Now
Telegram Group Join Now

ಮುಂಬೈ: ಮಹಾರಾಷ್ಟ್ರದ ಖ್ಯಾತ ಹಾಗೂ ಹಿರಿಯ ಲೇಖಕ, ಮಹಾನ್‌ ವಿದ್ವಾಂಸರಾದ ದಾಜಿ ಪನ್ಶಿಕರ್ ಅವರು ಶುಕ್ರವಾರ ನಿಧನರಾಗಿದ್ದಾರೆ. 92 ವರ್ಷ ವಯಸ್ಸಿನ ಪನ್ಶಿಕರ್ ತಮ್ಮ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಮಗನನ್ನು ಅಗಲಿದ್ದಾರೆ.

ದಾಜಿ ಪನ್ಶಿಕರ್ ಅವರು ಮರಾಠಿ ಸಾಹಿತ್ಯದ ಹಾಲ್​ಮಾರ್ಕ್ ಎಂದೇ ಖ್ಯಾತಿ ಗಳಿಸಿದ್ದರು.ಅವರು ರಾಮಾಯಣ, ಮಹಾಭಾರತ ಮತ್ತು ಸಂತ ವಾಂಗ್ಮಯಗಳ ವಿದ್ವಾಂಸರಾಗಿದ್ದರು.

50 ಕ್ಕೂ ಹೆಚ್ಚು ವರ್ಷಗಳ ಕಾಲ ಸಾಮಾಜಿಕ ಉಪನ್ಯಾಸಗಳನ್ನು ಮಾಡಿ ಜನರ ಉನ್ನತೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜಗತ್ತಿನಾದ್ಯಂತ ಅವರು 2500ಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ.

ಮರಾಠಿ ದಿನ ಪತ್ರಿಕೆ ಸಾಮ್ನಾದಲ್ಲಿ ಸತತ 16 ವರ್ಷಗಳ ಕಾಲ ಅಂಕಣ ಬರೆದಿರುವ ಪನ್ಶಿಕರ್‌ ಟೈಮ್ಸ್ ಸೇರಿದಂತೆ ಹಲವು ಪತ್ರಿಕೆಗಳಲ್ಲೂ ಲೇಖನ ಬರೆದಿದ್ದಾರೆ.

ಮಹಾಭಾರತ ಏಕ ಸುಧಾಚ ಪ್ರವಾಸ, ಕರ್ಣ ಖರ ಕೂಂ ತೋಟಾ?, ಕಥಾಮೃತಂ, ಕನಿಕಾನೀತಿ, ಶಂಕರಾಚಾರ್ಯರ ಸ್ತೋತ್ರ ಗಂಗೆಯ ಎರಡು ಭಾಗಗಳು, ಅಪರಿಚಿತ ರಾಮಾಯಣದ ಐದು ಭಾಗಗಳು, ಗಾನ ಸರಸ್ವತಿ ಕಿಶೋರಿ ಅಮೋಂಕರ್ – ಆದಿ ಶಕ್ತಿಚ ಧನ್ಯೋದ್ಗರ್ ಸೇರಿದಂತೆ ಅವರು ಪ್ರಸಿದ್ಧ ಕೃತಿಗಳನ್ನು ರಚಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!