ವಿಜಯಪುರ : ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ ಪರಿಣಾಮ ಪುಟಾಣಿ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ವಿಜಯಪುರದಲ್ಲಿ ನಡೆದಿದೆ. ಆರೋಹಿ ಅಜಿತ್ ಕಾಂಗ್ರೆ ಅಲಿಯಾಸ್ ಶಿವಾನಿ (4) ಮೃತ ಬಾಲಕಿಯಾಗಿದ್ದಾಳೆ.
ವಿಜಯಪುರ – ರಾಯಚೂರಿನ ನಡುವೆ ಸಂಚರಿಸುವ ಪ್ಯಾಸೆಂಜರ್ ರೈಲಿನ ಮೇಲಿನ ಶೋರಾಪುರದ ಹೊಟಗಿ ಗ್ರಾಮದ ಬಳಿ ಕಲ್ಲು ತೂರಾಟ ನಡೆಸಲಾಗಿತ್ತು.ಪುಣ್ಯಕ್ಷೇತ್ರದ ಯಾತ್ರೆ ಮುಗಿಸಿಕೊಂಡು ಶಿವಾನಿಯ ಕುಟುಂಬ ವಾಪಸಾಗುತ್ತಿದ್ದ ವೇಳೆ, ಕಿಟಕಿಯ ಬಳಿ ಕುಳಿತಿದ್ದ ಶಿವಾನಿಗೆ ಕಲ್ಲು ತಗುಲಿತ್ತು.
ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮುನ್ನವೇ ರಕ್ತಸ್ರಾವದಿಂದ ಸಾವನ್ನಪ್ಪಿತ್ತು.ರೇಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.