ಚೇಳೂರು : -ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿದ್ದ ಪಟ್ಟಣದ ಒಂದನೇ ಬ್ಲಾಕ್ ನ ಕುಂಟೆ ಬೀದಿ ಮುಸ್ಲಿಂ ಕಾಲೋನಿಯು ಇಂದು ಅಭಿವೃದ್ಧಿ ಕಂಡಿತು.
ಪಟ್ಟಣದ ಜಾಮೀಯ ಮಸೀದಿ ಹಿಂಭಾಗದಲ್ಲಿ ವಾಸಿಸುವ ಮುಸ್ಲಿಂ ಕುಂಟೆ ಕಾಲೋನಿಯು ಅಕ್ಷರಶಃ ಕೊಳಚೆ ಪ್ರದೇಶದಂತೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದರು.ಈ ಕಾಲೋನಿಗೆ ಸರಿಯಾದ ರೀತಿಯಲ್ಲಿ ಚರಂಡಿಗಳು ಮತ್ತು ಸರಿಯಾದ ರಸ್ತೆಯು ಇಲ್ಲದೆ ತೊಂದರೆ ಅನುಭವಿಸುತ್ತಿದ್ದರು.
ಈ ಕಾಲೋನಿಯು ತಗ್ಗು ಪ್ರದೇಶಗಳಲ್ಲಿದ್ದು ಮಳೆಬಂದರೆ ಮಳೆಯ ನೀರು ಮತ್ತು ನಿವಾಸಿಗಳು ಬಳಸಿದ ಮಾಲಿನ್ಯ ಚರಂಡಿ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುತ್ತಿತ್ತು, ಮನೆಗಳ ಮುಂದೆ ಕೆಸರು ರಸ್ತೆಗಳು ಕಲ್ಲುಗಳಿಂದ ಕೂಡಿದ ಈ ರಸ್ತೆಯಲ್ಲಿ ಕಾಲೋನಿ ವೃದ್ಧರು, ಮಕ್ಕಳು,ವಯಸ್ಸಾದ ಮುದುಕರು ತೊಂದರೆ ಅನುಭವಿಸಿದ ದಿನಗಳು ವರ್ಷಗಳಾಗಿ ಕಳೆದಿವೆ.ಈ ಭಾಗದಲ್ಲಿ ವಾಸಿಸುವ ಜನರು ಅನೇಕ ಭಾರಿ ಅಧಿಕಾರಿಗಳಿಗೆ ಸಂಬಂಧಿಸಿದವರಿಗೆ ಮೋರೆಹೋಗಿದ್ದರು.
ಈ ಸಮಸ್ಯೆಯು ಶಾಸಕರ ಗಮನಕ್ಕೆ ಬಂದ ಕೂಡಲೇ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಬೇಟಿ ನೀಡಿ ಕಣ್ಣಾರೆ ಸಮಸ್ಯೆಗಳನ್ನು ಕಂಡು ಕೊಳೆಗೇರಿಯಾದ ಈ ಕಾಲೋನಿಗೆ 40 ಲಕ್ಷ ರೂ ಮಂಜೂರಾತಿ ಮಾಡಿಸಿ ಕಾಂಕ್ರೀಟ್ ರಸ್ತೆಗಳು ಮತ್ತು ಚರಂಡಿಗಳನ್ನು ನಿರ್ಮಾಣ ಮಾಡಲು ಕಾಮಗಾರಿಗೆಗೆ ಚಾಲನೆ ನೀಡಿದ್ದರು.ಕಾಮಗಾರಿ ಮುಕ್ತಾಯದ ಬಳಿಕ ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಈ ಕಾಲೋನಿಯ ನಿವಾಸಿಗಳು ಕೃತಜ್ಞತೆ ತಿಳಿಸಿದ್ದರು.
ಈ ಸಂದರ್ಭದಲ್ಲಿ ಡಿ ಎಸ್ ಎಸ್ ಜಿಲ್ಲಾ ಸಂಚಾಲಕ ಕಡ್ಡೀಲು ವೆಂಕಟರಮಣ ಮಾತನಾಡಿ ಶಾಸಕರು ಕ್ಷೇತ್ರದ ವ್ಯಾಪ್ತಿಯಲ್ಲಿ ಮೊದಲು ಜನರ ಸಮಸ್ಯೆಗಳಿಗೆ ಮತ್ತು ಅಭಿವೃದ್ಧಿ ಕೆಲಸ ಕಾಮಗಾರಿಕೆಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದು, ಈ ನಿಟ್ಟಿನಲ್ಲಿ ಚೇಳೂರಿನ ಮುಸ್ಲಿಂ ಕುಂಟೆ ಕಾಲೋನಿಗೆ ಸುಮಾರು 40 ಲಕ್ಷ ವೆಚ್ಚದಲ್ಲಿ ಉತ್ತಮ ಚರಂಡಿಗಳು ಮತ್ತು ಸಿಸಿ ರಸ್ತೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ.ಈ ಸಂದರ್ಭದಲ್ಲಿ ಅವರಿಗೆ ನಿವಾಸಿಗಳ ಪರವಾಗಿ ಅಭಿನಂದನಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರನ್ನು ಉದ್ದೇಶಿಸಿ ಮುಖಂಡ ಜಿ.ವಿ.ಸುರೇಂದ್ರ ಮಾತನಾಡಿ ಸುಮಾರು ವರ್ಷಗಳಿಂದ ತೊಂದರೆಯನ್ನು ಅನುಭವಿಸುತ್ತಿದ್ದ ಈ ಕಾಲೋನಿಯ ನಿವಾಸಿಗಳಿಗೆ ಶಾಸಕರು ಒಳ್ಳೆಯ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಂಡು ಜನಪರ ಶಾಸಕರಾಗಿ ಸೇವೆ ಸಲ್ಲಿಸಿರುತ್ತಾರೆ ಅವರಿಗೆ ಚೇಳೂರು ಜನತೆ ಈ ಸಂದರ್ಭದಲ್ಲಿ ಅಭಿನಂದನೆಗಳನ್ನು ತಿಳಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಕೌಸ್ತರ್,ಕಡ್ಡೀಲು ವೆಂಕಟರಮಣ, ಜೆ ಎನ್ ಜಾಲಾರಿ,ನಯಾಜ್,ಸುರೇಂದ್ರ,ಆರ್.ವೆಂಕಟೇಶ್, ಸಾಬು,ಚಂದು,ಮಸ್ತಾನ್,ಪೂಲ ವೆಂಕಟೇಶ್, ಮತ್ತಿತರು ಕಾಂಗ್ರೆಸ್ ಮುಖಂಡರು ಹಾಜರಿದ್ದರು.ಚೇಳೂರು ಪಟ್ಟಣದ ಒಂದನೇ ಬ್ಲಾಕ್ ನಲ್ಲಿ ಮುಸ್ಲಿಂ ಕಾಲೋನಿಯ ನಿವಾಸಿಗಳು ಚರಂಡಿ ಮತ್ತು ಸಿಮೆಂಟ್ ರಸ್ತೆಗಳಿಲ್ಲದೇ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು.ಸುಮಾರು 40 ಲಕ್ಷ ರೂ ಅನುದಾನ ನೀಡಿ ಅಭಿವೃದ್ಧಿ ಮಾಡಿದ ರಸ್ತೆ ಮತ್ತು ಚರಂಡಿಗಳ ಕಾಮಗಾರಿ ಪೂರ್ಣಗೊಂಡ ಸಂದರ್ಭದಲ್ಲಿ ಚೇಳೂರು ಕಾಂಗ್ರೆಸ್ ಮುಖಂಡರು ಕೃತಜ್ಞತೆಗಳು ತಿಳಿಸಿದರು.ದಶಕಗಳ ಬೇಡಿಕೆ ಇಂದು ಈಡೇರಿಕೆಚೇಳೂರು ಪಟ್ಟಣದ ಒಂದನೇ ಬ್ಲಾಕ್ ನಲ್ಲಿ ಮುಸ್ಲಿಂ ಕಾಲೋನಿಯ ದಶಕಗಳ ಬೇಡಿಕೆ ಇಂದು ಈಡೇರಿಕೆ
ವರದಿ :ಯಾರಬ್. ಎಂ.