ಬೀದರ : ಜಿಲ್ಲೆಯಲ್ಲಿ ಅಗಸ್ಟ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಲು ಆಗ್ರಹಿಸಿ. ಸೆಪ್ಟೆಂಬರ್10 ರಂದು ಭಾಲ್ಕಿ ತಹಸಿಲ ಕಚೇರಿ ಚಲೊ ನಡೆಸಲು ತೀರ್ಮಾನಿಸಲಾಗಿದೆ ಎಂದು ಯುವ ಮುಖಂಡ ಡಿ ಕೆ ಸಿದ್ರಾಮ ತಿಳಿಸಿದರು.
ಅವರು ಇಂದು ಭಾಲ್ಕಿ ತಾಲೂಕಿನ ಆನಂದವಾಡಿ ನಿಡೆಬನ ,ಇಂಚೂರು,ಸಾಯಗಾಂವ, ಕೋಂಗಳಿ ಬ್ರಿಜಗಳ ಸುತ್ತ ಮುತ್ತಿನ ಇರುವ ಭಾಗದಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಬೇಳೆಯನ್ನು ವಿಕ್ಷಿಸಿದ ಮಾತನಾಡಿದ ಡಿ.ಕೆ.ಸಿದ್ರಾಮ ಅವರು ಆಗಸ್ಟ್ ತಿಂಗಳಲ್ಲಿ ಬೀದರ್ ಜಿಲ್ಲೆಯಾದ್ಯಂತ ಸುರಿದ ಅತಿವೃಷ್ಟಿಯಿಂದಾಗಿ ಹೆಸರು, ಉದ್ದು, ತೊಗರಿ, ಸೋಯಾಬೀನ್ ,ಕಬ್ಬು ಸೇರಿದಂತೆ ಅಂದಾಜು 15 ಸಾವಿರಕ್ಕು ಹೆಚ್ಚು ಎಕರೆಯ ಬೆಳೆ ಹಾನಿಯಾಗಿದ್ದು, ನೂರಾರು ಮನೆಗಳು, ರಸ್ತೆ–ಸೇತುವೆಗಳು ಹಾಗೂ ಮೂಲಸೌಕರ್ಯಗಳಿಗೆ ಭಾರೀ ಹಾನಿಯಾಗಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ದವಸ ಧಾನ್ಯ ಹಾಳಾಗಿದೆ, ವಿದ್ಯುತ್ ಸಂಪರ್ಕ ವ್ಯತ್ಯಯವಾಗಿದೆ.
ರೈತರಿಗೆ ಬಹಳಷ್ಟು ನಷ್ಟ ಸಂಭವಿಸಿದೆ.
ತಾಲೂಕಿನ ಸಮಸ್ತ ರೈತರು ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರದ ಮೇಲೆ ಒತ್ತಡ ತರಲು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆಯಲು ಪ್ರಯತ್ನಿಸಬೇಕು ಎಂದು ಯುವ ಮುಖಂಡ ಡಿ ಕೆ ಸಿದ್ರಾಮ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಪ್ರತಾಪ ಪಾಟೀಲ, ಶಿವಾಜಿ ದೇಶಮುಖ,ನವ ಚೈತನ್ಯ ಸೇವಾ ಸಮಿತಿ ಜಿಲ್ಲಾಧ್ಯಕ್ಷರಾದ ಶ್ರೀ ಶರದ ದುರ್ಗಳೆ, ಜೈರಾಜ ಕೋಳ್ಳಾ ,ಕೈಲಾಸ ಪಾಟೀಲ ಶಿವರಾಜ ಭೂರೆ ಕಲ್ಲಪ್ಪಾ ಭೂರೆ,ಮಾರುತಿ ಭೂರೆ ಶಿವಾಜಿ ಮೇತ್ರೆ, ಸುಭಾಷ್ ಮಾಶೆಟ್ಟೆ,ಸಂಗಮೇಶ ಟೆಂಕಾಳೆ,ಜಗದಿಶ ಬಿರಾದಾರ, ಕನಕ ಮಲ್ಲೆಶಿ ಸಂಜಿವ ದುರ್ಗಳೆ ಮಲ್ಲಪ್ಪಾ ದೇಶಮುಖ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಸಂತೋಷ್ ಬಿಜಿ ಪಾಟೀಲ್




