ಕಿತ್ತೂರು: ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ಸಚಿವರಾದ ಶ್ರೀ ಚಲುವರಾಯಸ್ವಾಮಿ ಅಮೃತ ಹಸ್ತದಿಂದ ನಿನ್ನೆ ಕ್ರಾಂತಿ ನೆಲ ಕಿತ್ತೂರು ನಾಡ ರೈತರಿಗೆ ಅನುಕೂಲವಾಗುವಂತೆ ಸಮಗ್ರ ಕೃಷಿ ಪದ್ಧತಿ ಶ್ರೇಷ್ಠತಾ ಕೇಂದ್ರದ ಹೊಸ ಕಟ್ಟಡ ಸ್ಥಾಪನೆ ಉದ್ಘಾಟನೆ ಮಾಡುವ ಮೂಲಕ ಬಂಪರ್ ಗಿಫ್ಟ್ ಕೊಟ್ಟಿದ್ದಾರೆ.
ಕರ್ನಾಟಕ ಗೃಹ ಮಂಡಳಿ ಸಹಯೋಗದಲ್ಲಿ ನಿರ್ಮಾಣವಾದ ಈ ಕಟ್ಟಡವು ನಿನ್ನೆ ಪೂಜ್ಯ ಮಡಿವಾಳ ರಾಜ ಯೋಗಿನ್ದ್ರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ , ಶಾಸಕ ಬಾಬಾ ಸಾಹೇಬ್ ಪಾಟೀಲರ ಅಧ್ಯಕ್ಷತೆಯಲ್ಲಿ ನಡೆದ ಈ ಉದ್ಘಾಟನಾ ಕಾರ್ಯಕ್ರಮವು ಆಯುಕ್ತ ವೈ.ಎಸ್ ಪಾಟೀಲ್, ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ್ , ಉಪ ನಿರ್ದೇಶಕರು ಆದ ಎಸ್.ಬಿ ಕೊಂಗಾವಾಡ ಹಾಗೂ ಸಹಾಯಕ ನಿರ್ದೇಶಕ ಬಸವರಾಜು ದಳವಾಯಿ, ಕೃಷಿ ಅಧಿಕಾರಿ ಮಂಜುನಾಥ ಕೆಂಚರಾಹುತ್, ಕರ್ನಾಟಕ ಗೃಹ ಮಂಡಳಿ Aee ಜ್ಯೋತಿ ಭೀಮರಾವ್ ನಜಾರೆ, ಕೃಷಿ ಮಂಡಳಿ ತಾಲ್ಲೂಕು ನಿರ್ದೇಶಕರ ನೇತೃತ್ವದಲ್ಲಿ, ಎಲ್ಲಾ ರೈತರು, ಕಾಂಗ್ರೆಸ್ ಪಕ್ಷದ ಮುಖಂಡರ ಸಮ್ಮುಖದಲ್ಲಿ ಈ ಸಮಗ್ರ ಕೃಷಿ ಪದ್ಧತಿ ಶ್ರೇಷ್ಠತಾ ಕೇಂದ್ರವು ಉದ್ಘಾಟನೆ ಗೊಂಡಿತು.
ಈ ಸಂದರ್ಭದಲ್ಲಿ ರೈತರನ್ನು ಉದ್ದೇಶಿಸಿ ಸೌಲಭ್ಯಗಳ ಬಗ್ಗೆ ಮಾತನಾಡಿದರು. ನಂತರ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರ ಸಂವಾದದಲ್ಲಿ ಮಾತನಾಡಿದ ಚಲುವರಾಯಸ್ವಾಮಿ ಮತ್ತು ಸಹಾಯಕ ಕೃಷಿ ನಿರ್ದೇಶಕ ಬಸವರಾಜು ದಳವಾಯಿಯವರು ಮಾತನಾಡಿದರು. ಇದೇ ಸಂದರ್ಭದಲ್ಲಿ Mk ಹುಬ್ಬಳ್ಳಿ ಹಾಗೂ ಪಾರಿಶ್ವಾಡದಲ್ಲಿ ರೈತ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸುವಂತೆ ನಮ್ಮ ಉಪ ಸಂಪಾದಕ ಬಸವರಾಜು ಅವರು ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಬೆಳೆ ಸಮೀಕ್ಷಾದರರ ಸಮಸ್ಯೆಗಳನ್ನು ಬಗೆಹರಿಸಿಸುವಂತೆ ನಮ್ಮ ನ್ಯೂಸ್ ಸಮೂಹ ಒತ್ತಾಯ ಮಾಡಿತು. ಒಟ್ಟಾರೆ ಕಿತ್ತೂರ ನಾಡಿಗೆ ಬಂಪರ್ ಗಿಫ್ಟ್ ಕೃಷಿ ಇಲಾಖೆಗೆ ಧನ್ಯವಾದಗಳು.
ವರದಿ: ಬಸವರಾಜು