ಬಾಣಾವರ : ಹೋಬಳಿ ವ್ಯಾಪ್ತಿಯ ಬಸವರಾಜಪುರದಿಂದ ಮರುಳದೇವರ ಮಠದ ರಸ್ತೆ ಮಾರ್ಗವಾಗಿ ಗರುಡನಗಿರಿ ರಸ್ತೆಗೆ ಸೇರುವ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆಯನ್ನು ಶಾಸಕ ಹಾಗೂ ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಇಂದು ಬಸವರಾಜಪುರ ಗ್ರಾಮದಲ್ಲಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಈ ರಸ್ತೆ ಅನೇಕ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತದೆ, ಈ ಭಾಗದಲ್ಲಿ ಜಮೀನುಗಳಿದ್ದು ರೈತರುಗಳಿಗೆ ಇದು ಅನುಕೂಲವಾಗಲಿದೆ ಎಂದರು. ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಿ ಇಂಜಿನಿಯರುಗಳಿಗೆ ಸೂಚನೆ ನೀಡಿದರು.
ಈ ಕಾರ್ಯದಲ್ಲಿ ಮಾಜಿ ಜಿ.ಪಂ.ಉಪಾಧ್ಯಕ್ಷ ಹಾಗೂ ಮುಖಂಡ ಬಿಳಿಚೌಡಯ್ಯ, ಮಾಜಿ ತಾ.ಪಂ.ಅಧ್ಯಕ್ಷೆ ಮಂಜುಳಾಬಾಯಿ, ಮಾಜಿ ಗ್ರಾ.ಪಂ ಅಧ್ಯಕ್ಷ ಕುಬೇರ ಮುಖಂಡರಾದ ಮೋಕ್ಷರಾಜು, ಹರತನಹಳ್ಳಿ ಜಯಣ್ಣ, ಕೊಮ್ಮಾರಘಟ್ಟ ನಾಗರಾಜ ಬ್ಯಾಡರಹಳ್ಳಿ ರಂಗಪ್ಪ, ಅಶೋಕ, ಗುಂಡಣ್ಣ, ಗಂಗಾಧರ ಹಾಗೂ ಗ್ರಾಮಸ್ಥರು ಹಾಜರಿದ್ದರು..
ವರದಿ : ರಾಜು ಅರಸಿಕೆರೆ




