Ad imageAd image

‘ಖಾಸಗಿಯವರ ಲಾಬಿಗೆ ಇಂದು ಶಿಕ್ಷಣ ವ್ಯವಸ್ಥೆ ನಾಶ ಖಂಡನೀಯ’

Bharath Vaibhav
‘ಖಾಸಗಿಯವರ ಲಾಬಿಗೆ ಇಂದು ಶಿಕ್ಷಣ ವ್ಯವಸ್ಥೆ ನಾಶ ಖಂಡನೀಯ’
WhatsApp Group Join Now
Telegram Group Join Now

ಈ ಕೆಪಿಎಸ್ ಶಾಲೆಯಿಂದ ವಿಲೀನವಾಗುತ್ತಿರುವ ಶಾಲೆಗಳು ಸುಮಾರು 2ರಿಂದ 6 ಕಿಮೀ ದೂರದಲ್ಲಿದೆ. ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ. ದಾಖಲಾತಿ ನೆಪಹೇಳಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ. ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಯಾಕೆ ಕಡಿಮೆಯಾಗುತ್ತಿದೆ ಎಂದು ಅಧ್ಯಯನ ಮಾಡದೇ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ, ಶಿಕ್ಷಕರ ನೇಮಕಾತಿ ಸರಿಯಾದ ಸಮಯಕ್ಕೆ ಪಠ್ಯ ಪುಸ್ತಕ ನೀಡದೆ ಹಾಗೂ ಸೈಕಲ್ ಯೋಜನೆ ನಿಲ್ಲಿಸಿರುವುದು ಹೀಗೆ ಯಾವುದೇ ಸೌಲಭ್ಯ ನೀಡದೆ ಸರ್ಕಾರ ಖಾಸಗಿಯವರ ಲಾಬಿಗೆ ಇಂದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ನಾಶ ಮಾಡಲು ಸರ್ಕಾರ ಮುಂದಾಗಿರುವುದು ಖಂಡನೀಯ ಎಂದರು.

ಎಸ ಎಫ್ ಐ ಮಾಜಿ ಕೇಂದ್ರ ಸಮಿತಿ ಸದಸ್ಯ ಶಬ್ಬೀರ್ ಜಾಲಹಳ್ಳಿ ಮಾತನಾಡಿ, ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ಹಾಗೂ ಖಾಲಿ ಇರುವ 59,000 ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವ ಬದಲು ಕೆಪಿಸಿ ಹೆಸರಿನಲ್ಲಿ ಬಡವರ ಮಕ್ಕಳು ಓದುವ ಸರ್ಕಾರಿ ಶಾಲೆಗಳನ್ನು ಮುಚ್ಚುಲು ಹೊರಟಿರೋದು ನಾಚಿಕೆಗೇಡು. ಕೂಡಲೇ ಕೈ ಬಿಟ್ಟು ಸರ್ಕಾರಿ ಶಾಲಾ ಕಾಲೇಜುಗಳನ್ನು ಅಭಿವೃದ್ಧಿ ಪಡಿಸಿ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿ ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಎಸ್ ಎಫ್ ಐ ವಲಯ ಘಟಕ ಅಧ್ಯಕ್ಷ ಶಿವರಾಜ, ಕಾರ್ಯದರ್ಶಿ ರಂಗನಾಥ್, ಭಾಷಾ ಸಾಬ್. ಸಂತೋಷ್ ತ್ಯಾಪ್ಲಿ. ದಿಲ್ ಶಾದ್,ರೈತ ಸಂಘಟನೆಯ ತಾಲ್ಲೂಕು ಕಾರ್ಯದರ್ಶಿ ಮೌನೇಶ್ ಜಾಲಹಳ್ಳಿ. ರಂಗನಾಥ ಬುಂಕಲದೊಡ್ಡಿ. ಡಿವೈಎಫ್ಐ ಮುಖಂಡ ರಿಯಾಜ್ ಆರ್ಥಿ, ರಾಜು ನಾಯಕ, ಮುಕ್ತಂ ಪಾಷಾ. ಬಸವರಾಜ ವಂದಲಿ, ಮತ್ತು ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರದಿ: ಗಾರಲದಿನ್ನಿ ವೀರನ ಗೌಡ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!