ಸಿಂಧನೂರು: ನಗರದ ಶಾದಿಮಹಲ್ ನಲ್ಲಿ ಸಿಪಿಐಎಂಎಲ್ ರೆಡ್ ಸ್ಟಾರ್ ಕಮ್ಯುನಿಸ್ಟ್ ಪಕ್ಷ ಸಂಘಟಿಸಿದ್ದ ಜಿಲ್ಲಾ ಮಟ್ಟದ ವಿಚಾರ ಸಂಕಿರಣವು ಅತ್ಯಂತ ಯಶಸ್ವಿಯಾಗಿ ಜರುಗಿತು. ಎಂದು ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ ಹೇಳಿದರು.
ಹಿರಿಯ ಪತ್ರಕರ್ತ ಡಿ ಹೆಚ್. ಕಂಬಳಿ. ಉಪನ್ಯಾಸಕ ನಾರಾಯಣ ಬೆಳಗುರ್ಕಿ ಅವರ ಉಪಸ್ಥಿತಿಯಲ್ಲಿ ಕಮ್ಯುನಿಸ್ಟ್ ಪಕ್ಷದ ಮುಖಂಡ ಆರ್. ಮಾನಸಯ್ಯ ಮಾತನಾಡಿ : ಕಮ್ಯುನಿಸ್ಟರು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಅಪಾರವಾದ ತ್ಯಾಗ ಬಲಿದಾನ ಮಾಡಿದ ತೆಲಂಗಾಣ, ತೆಭಾಗ, ಕಯ್ಯುರ, ವರ್ಲಿ, ಸುವರ್ಣ ಕಣಿವೆ ಸೇರಿದಂತೆ ಮುಂಬೈ ಕಾರ್ಮಿಕರ ಹಾಗೂ ನೌಕಾದಳಗಳ ಬಂಡಾಯಗಳಿಗೆ ನೇತೃತ್ವ ವಹಿಸಿದರು
ಆದರೆ, ತಪ್ಪಾದ ಕಾರ್ಯತಂತ್ರ ಹಾಗೂ ಕಾಂಗ್ರೆಸ್ ಪಾರ್ಟಿಯ ಕುರಿತು ತಾಳಿದ ಅನಿರ್ದಿಷ್ಟ ಅವಗಹನೆಯಿಂದಾಗಿ ಸ್ವಾತಂತ್ರ್ಯ ಚಳುವಳಿಗೆ ನೇತೃತ್ವ ಕೊಡಲಾಗಲಿಲ್ಲ. ಇಡೀ ಸಂಘ ಪರಿವಾರ ಬ್ರಿಟಿಷ್ ವಸಾಹಾತುವಾದಿಗಳ ಜೊತೆ ಇದ್ದು ಭಾರತದ ಸ್ವಾತಂತ್ರ್ಯ ಚಳುವಳಿಗೆ ದ್ರೋಹ ಬಗೆಯಿತು. ಮುಸ್ಲಿಂ ಲೀಗ್ ಸ್ವಾತಂತ್ರ್ಯ ಚಳುವಳಿಯಲ್ಲಿ ಇದ್ದುಕೊಂಡೆ ದ್ವಿರಾಷ್ಟ್ರ ಸ್ವಾತಂತ್ರ್ಯವನ್ನು ಪ್ರತಿಪಾದಿಸಿತು
ಸ್ವಾತಂತ್ರ್ಯ ಚಳುವಳಿ ಎಂದರೆ ಕೇವಲ ಕಾಂಗ್ರೆಸ್ ಅಲ್ಲವೇ ಅಲ್ಲ. ಕಮ್ಯುನಿಸ್ಟರ ವಿರೋಚಿತವಾದ ಹೋರಾಟದ ತ್ಯಾಗ ಬಲಿದಾನ ಇದರ ಹಿಂದಿದೆ ಈ ದೇಶದ ರೈತ, ಕಾರ್ಮಿಕ, ಆದಿವಾಸಿ ಹಾಗೂ ದಮನಿತರ ಪ್ರತಿಯೊಂದು ಹೋರಾಟಗಳ ಹಿಂದೆ, ವಿಶೇಷವಾಗಿ ಸ್ವಾತಂತ್ರ ಚಳುವಳಿಯಲ್ಲಿ ಕಮ್ಯುನಿಷ್ಟರು ಅಮೋಘವಾದ ತ್ಯಾಗ ಬಲಿದಾನ ಮಾಡಿದ್ದಾರೆ ಎಂದು ವಿಚಾರ ಮಂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂದೇಗಾಲ ಶ್ರೀನಿವಾಸ್ ವಹಿಸಿದ್ದರು. ಪ್ರಾಸ್ತಾವಿಕವಾಗಿ ಎಂ. ಗಂಗಾಧರ ಅವರು ಮಾತನಾಡಿದರು, ಸಂಕಿರಣದ ನಿರೂಪಣೆಯನ್ನು ಆದೇಶ ನಗನೂರು, ಉಪನ್ಯಾಸಕರು ಶಂಕರ ವಾಲೇಕರ್, ಸಿಪಿಎಂ ನ ಮುಖಂಡರು ಬಸವಂತರಾಯ ಗೌಡ ಕಲ್ಲೂರು, ರಾಜ್ಯ ರೈತ ಸಂಘದ ಪ್ರ. ಕಾರ್ಯದರ್ಶಿ ಬಸವರಾಜ ಗೋಡಿಹಾಳ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎಚ್.ಇ. ಸಣ್ಣಪ್ಪ, ಜಯಣ್ಣ ಕೊಡಗು, ಸಂದೀಪ್. ಆರ್, ಸಂತೋಷ್ ಹಿರೆದಿನ್ನಿ, ಮಾರುತಿ ಜಿನ್ನಾಪುರ್, ಎಸ್ ದೇವೇಂದ್ರಗೌಡ, ಗಿರಿಲಿಂಗ ಸ್ವಾಮಿ ದೇವದುರ್ಗ, ಮಸ್ಕಿ ವೆಂಕಟೇಶ್ ನಾಯಕ್, ಮಾನವಿ ಯಲ್ಲಪ್ಪ ಉಟಕನೂರು, ಎಂ. ನಿರಂಜನ್, ಸಮರ, ಬಸವರಾಜ ಎಕ್ಕಿ, ಹೆಚ್. ಆರ್. ಹೊಸಮನಿ, ಮುದಿಯಪ್ಪ, ರಾಮಕೃಷ್ಣ ಮಾನ್ವಿ, ಹುಲಗಪ್ಪ ಬಳ್ಳಾರಿ ಮುಂತಾದವರು ಭಾಗವಹಿಸಿದರು
ವರದಿ:ಬಸವರಾಜ ಬುಕ್ಕನಹಟ್ಟಿ




