ರಾಯಚೂರು : 20 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಅಂಚೇಸುಗೂರು ಬಳಿ ಬಸ್ ಪಲ್ಟಿಯಾಗಿ ಅಂಚೇಸುಗೂರಿನ ಕೆನಾಲ್ ಸೇತುವೆ ದಾಟುವ ವೇಳೆ ಬಸ್ ಪಲ್ಟಿಯಾಗಿರುತ್ತದೆ ಅಂಜುಳ ಗ್ರಾಮದಿಂದ ದೇವದುರ್ಗಕ್ಕೆ ವಾಪಾಸಾಗುವಾಗ ಈ ಘಟನೆ ನಡೆದಿರುತ್ತದೆ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುವ ರೈತರಿಂದ ಪ್ರಯಾಣಿಕರ ರಕ್ಷಣೆ ಮಾಡಲಾಗಿದೆ.
ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ಸಲಾಕೆಗಳಿಂದ ಬಸ್ಸಿನ ಗಾಜು ಒಡೆದು ಪ್ರಯಾಣಿಕರ ರಕ್ಷಣೆ ಮಾಡಲಾಗಿದೆ ಚಾಲಕನ ಸ್ಥಿತಿ ಗಂಭೀರ ಗಾಯ, ರಾಯಚೂರಿನ ರಿಮ್ಸ್ ಗೆ ರವಾನೆ ಮಾಡಲಾಗಿದೆ.
ಎಷ್ಟು ಹೊತ್ತಾದರೂ ಆಂಬ್ಯುಲೆನ್ಸ್ ಬಾರದ ಕಾರಣ ಟಂಟಂ, ಬೈಕ್ ಗಳಲ್ಲಿ ಗಾಯಾಳುಗಳ ರವಾನೆ ಮಾಡಲಾಯಿತು.
ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವರದಿ : ಗಾರಲದಿನ್ನಿ ವೀರನಗೌಡ




