Ad imageAd image

ಕರ್ತವ್ಯ ಲೋಪದ ಹಿನ್ನೆಲೆ ವಜಾ : KKRTC ಬಸ್ ಅನ್ನೆ ಕದ್ದೋಯ್ದಿದ್ದ ಚಾಲಕ

Bharath Vaibhav
ಕರ್ತವ್ಯ ಲೋಪದ ಹಿನ್ನೆಲೆ ವಜಾ : KKRTC ಬಸ್ ಅನ್ನೆ ಕದ್ದೋಯ್ದಿದ್ದ ಚಾಲಕ
ksrtc
WhatsApp Group Join Now
Telegram Group Join Now

ಯಾದಗಿರಿ : ಆತ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ವಜಾಗೊಂಡಿದ್ದ. ಬಳಿಕ ಊರಿಗೆ ತೆರಳಲು ವಾಹನ ಸಿಗದಿದ್ದಕ್ಕೆ KKRTC ಬಸ್ ಅನ್ನೆ ಕದ್ದೋಯ್ದಿದ್ದಾನೆ  ಯಾದಗಿರಿ ತಾಲೂಕಿನ ಸೈದಾಪುರ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ.

ವಜಾಗೋಂಡ ಚಾಲಕನಿಂದಲೇ ಕೆಕೆಆರ್‌ಟಿಸಿ ಬಸ್ ಕಳ್ಳತನ ನಡೆದಿದೆ ಮಾರ್ಚ್ 19 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸೈದಾಪುರ ನಿಲ್ದಾಣದಲ್ಲಿ ನಿಲ್ಲಿಸಿದ ಬಸ್ ಅನ್ನು ಮಹಿಪಾಲರೆಡ್ಡಿ ಎಂಬ ವಜಾಗೋಂಡ ನೌಕರ ಕದ್ದು ಒಯ್ದಿದ್ದಾನೆ. ಕೆಕೆಆರ್‌ಟಿಸಿಯ ಚಾಲಕ ಕಮ್ ನಿರ್ವಾಹಕನಾಗಿದ್ದ ಮಹಿಪಾಲರೆಡ್ಡಿ ಕರ್ತವ್ಯ ಲೋಪ ಆರೋಪದ ಹಿನ್ನೆಲೆಯಲ್ಲಿ ಆತನನ್ನು ವಜಾ ಮಾಡಲಾಗಿತ್ತು.

ವಜಾಗೊಂಡ ಚಾಲಕ ಮಹಿಪಾಲ ರೆಡ್ಡಿ ಇಂದಲೇ ಇದೀಗ ಬಸ್ ಕಳ್ಳತನ ನಡೆದಿದೆ. ಸ್ವಗ್ರಾಮ ರಾಜನಹಳ್ಳಿಗೆ ಹೋಗಲು ಯಾವುದೇ ವಾಹನ ಸಿಕ್ಕಿರಲಿಲ್ಲ. ಬಸ್ ಕಳ್ಳತನ ಮಾಡಿ ಗ್ರಾಮದ ದೇವಸ್ಥಾನದ ಬಳಿ ನಿಲ್ಲಿಸಿದ್ದಾನೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ಚಾಲಕನ ಮಹಿಪಾಲ ರೆಡ್ಡಿ ವಿರುದ್ಧ ಕೆಎಸ್ ದಾಖಲಾಗಿದೆ. ಕಳ್ಳತನವಾಗಿದ್ದ ಕೆಕೆಆರ್‌ಟಿಸಿ ಬಸ್ ಅನ್ನು ಪೊಲೀಸರು ವಾಪಸ್ ತಂದಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!