ನಿಪ್ಪಾಣಿ: ಗ್ರಾಮೀಣ ಪ್ರದೇಶದಲ್ಲಿಯ ಬಡ ರೈತರ ಆರ್ಥಿಕ ಸಮೃದ್ಧಿಯ ಧ್ಯೇಯ ಹೊತ್ತು ಎರಡುವರೆ ದಶಕಗಳ ಹಿಂದೆ ಸ್ಥಾಪಿಸಿದ ಶ್ರೀ ಸಿದ್ದೇಶ್ವರ ಕ್ರೆಡಿಟ್ ಸೊಸಾಯಿಟಿ ಇಂದು ಹೆಮ್ಮೆರವಾಗಿ ಬೆಳೆಯುತ್ತಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಂಸ್ಥಾಪಕ ಅಧ್ಯಕ್ಷ ಅಣ್ಣಾಸಾಹೇಬ ಹವಲೆ ತಿಳಿಸಿದರು.
ಅವರು ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದಲ್ಲಿ ಸಿದ್ದೇಶ್ವರ ಕ್ರೆಡಿಟ್ ಸೊಸೈಟಿಯ 17ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾರಂಭದಲ್ಲಿ ಡಾಕ್ಟರ್ ಅಭಿನಂದನ್ ಮುರಾಬಟ್ಟೆ ಪ್ರದೀಪ್ ಜಾದವ್ ಶಿವಾಜಿ ಮಾಳಿ ಕುಬೇರ್ ಅಳತೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುಮಿತ್ರ ಉಗಳೇ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ ಅಲಂಕಾರ ಅವರ ಉಪಸ್ಥಿತಿಯಲ್ಲಿ ಪ್ರತಿಮೆ ಪೂಜೆ ದೀಪ ಪ್ರಜ್ವಲನೆ ಹಾಗೂ ರಿಬ್ಬನ್ ಕಟ್ ಮಾಡುವುದರ ಮೂಲಕ ನೂತನ ಶಾಖೆಯನ್ನು ಆರಂಭಿಸಿದರು.
ಈ ಸಂದರ್ಭದಲ್ಲಿ ಗಣ್ಯರಿಂದ ಠೇವು ಪಾವತಿ ವಿತರಣೆ ಮಾಡಲಾಯಿತು ಇದೇ ಸಂದರ್ಭದಲ್ಲಿ ಡಾಕ್ಟರ್ ಅಭಿನಂದನ್ ಮೂರಾಬಟ್ಟೆ ಮಾತನಾಡಿ ಸಿದ್ದೇಶ್ವರ ಸಂಸ್ಥೆಯ ಬೆಳವಣಿಗೆ ಹಾಗೂ ನೀಡಲಾಗುತ್ತಿರುವ ಸೇವೆಗಳ ಕುರಿತು ವಿವರಿಸಿ ಬ್ಯಾಂಕಿನೊಂದಿಗೆ ಸರ್ವ ಸದಸ್ಯರು ಸಂಪರ್ಕಹೊಂದಿ ಯೋಜನೆಯ ಲಾಭ ಪಡೆದುಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಶಿವಪ್ಪ ಮಾಳಗೆ ಜಯಪಾಲ ಹವಲೆ ಬಾಬಾ ಸಾಹೇಬ ನಿಕಮ, ಮಲ್ಲಪ್ಪ ಭಾಗಾಜಿ ಮಹಾವೀರ್ ಪಾಟೀಲ ಮುಖ್ಯ ವ್ಯವಸ್ಥಾಪಕ ಸಂಜಯ ಹವಲೆ ರಾಜು ಖಿಚಡೇ ಸೇರಿದಂತೆ ಕಾರದಗಾ ಬೋರಗಾ ವ ಗ್ರಾಮದ ಗಣ್ಯರು ಉಪಸ್ಥಿತರಿದ್ದರು.
ಮಹಾವೀರ ಚಿಂಚಣೆ: ನಿಪ್ಪಾಣಿ