Ad imageAd image

ಶಾಲಾ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡ ದೈಹಿಕ ಶಿಕ್ಷಕಿ, ಕಣ್ಮುಚ್ಚಿ ಕುಳಿತ ಶಿಕ್ಷಣ ಇಲಾಖೆ

Bharath Vaibhav
ಶಾಲಾ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡ ದೈಹಿಕ ಶಿಕ್ಷಕಿ, ಕಣ್ಮುಚ್ಚಿ ಕುಳಿತ ಶಿಕ್ಷಣ ಇಲಾಖೆ
WhatsApp Group Join Now
Telegram Group Join Now

ಬೈಲಹೊಂಗಲ : ವಿದ್ಯೆ ಕಲಿಸುವನ್ನ ಬಿಟ್ಟು ಶಾಲೆಯಲ್ಲಿನ ಕಾರ್ಯಕ್ರಮದ ಕೆಲಸಕ್ಕಾಗಿ 2 ಕಿಲೋ ಮಿಟರ ದೂರ ವಿದ್ಯಾರ್ಥಿಗಳನ್ನು ಕಳುಹಿಸಿ ದೈಹಿಕ ಶಿಕ್ಷಕಿ ಒಬ್ನಳು ಶಿಕ್ಷಕಿ ವೃಂದಕ್ಕೆ ಕಳಂಕ ತಂದಿಟ್ಟಿದ್ದಾಳೆ.

ಸರಕಾರ ಶೈಕ್ಷಣಿಕ ಪ್ರಗತಿಗೆ ಎಷ್ಟೆಲ್ಲಾ ಯೋಜನೆಗಳನ್ನು ಜಾರಿಗೆ ತಂದಿದ್ದರು ಕೂಡ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಅವರ ದುರ್ಬಳಕೆ ಆಗುತ್ತಿರುವುದಕ್ಕೆ ಕಡಿವಾಣ ಹಾಕುವವರೆ ಇಲ್ಲದಂತಾಗಿದೆ.

ಹೌದು ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಮುರಕುಂಬಿ ಸರಕಾರಿ ಪ್ರೌಡ ಶಾಲೆಯಲ್ಲಿ ದೈಹಿಕ ಶಿಕ್ಷಕಿಯಾದ ಸುಜಾತಾ ಕಡಕೋಳ ಇವರು ಮಕ್ಕಳಿಗೆ ಶಿಕ್ಷಣ ನೀಡುವ ಬದಲು ಮಕ್ಕಳನ್ನು ಕೆಲಸಕ್ಕೆ ಬಳಸಿಕೊಂಡಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಅದು ನೀಜ ಆದರೆ ಶಾಲಾ ಮಕ್ಕಳನ್ನು ಶಾಲೆಯಲ್ಲಿನ‌ ಕೆಲಸಕ್ಕಾಗಿ 9 ನೇಯ ತರಗತಿಯಲ್ಲಿ ಒದುವ ಮಕ್ಕಳನ್ನು ಮುಂಜಾನೆ 11 ಗಂಟೆಗೆ ಸುಮಾರು 3 ಗಂಟೆಯ ಕಾಲ 2 ಕಿಲೊ‌ಮಿಟರ ದೂರದ ಹೊಲಕ್ಕೆ ಕಳಿಸಿ ಒತ್ತುವ ಗಾಡಿಯಲ್ಲಿ ಮಣ್ಣು ತರುವ ಕೆಲಸಕ್ಕೆ ಕಳಿಸಿದ್ದಾಳೆ, ಅದು ಕೂಡ ಶಾಲಾ ಸಮವಸ್ತ್ರದ ಜೊತೆ,,ಹಾಗಾದರೆ ಈ ಶಿಕ್ಷಕಿ ಮಕ್ಕಳ ಮುಂದಿನ ಭವಷ್ಯ ರೂಪಿಸುವ ಬದಲು ಶಿಕ್ಷಣ ನಿಡದೆ ವಿದ್ಯಾರ್ಥಿಗಳ ಬದುಕನ್ನು ಹಾಳು ಮಾಡಲು ಹೊರಟಿದ್ದಾಳೆ,

ಇನ್ನು ಶಾಲಾ ಮುಖ್ಯೋಪಾದ್ಯಾಯಿನಿ ಇವರನ್ನ ಕೇಳಿದರೆ ಅವರೇನು ಮಾಡಬಾರದನ್ನ ಮಾಡಿಲ್ಲ, ನಮ್ಮ ಸಂಬಂದಿಕರು ಕೂಡ ಪತ್ರಕರ್ತರಿದ್ದಾರೆಂದು ಸುದ್ದಿ ಮಾಡಲು ಹೋದವರಿಗೆ ಅವಾಜ ಹಾಕಿದ್ದಾಳೆ.ಮನೆಯಿಂದ ಶುಚಿಯಾದ ಶಾಲಾ ಸಮವಸ್ತ್ರ ಧರಿಸಿಕೊಂಡು ಬಂದ ಮಕ್ಕಳನ್ನು ಗಂಟೆಗಟ್ಟಲೆ ಕಲ್ಲು ಮಣ್ಣು ತರಲು ಹೊರಗಡೆ ಕಳಿಸುತ್ತಾಳೆಂದರೆ ಈ ದೈಹಿಕ ಶಿಕ್ಷಕಿಗೆ ಹೇಳೊರು,ಕೇಳೊರು ಯಾರು ಇಲ್ಲದಂತಾಗಿದೆ.

ಇನ್ನು ಶಾಲಾ ಸುಧಾರಣ ಸಮಿತಿ ವತಿಯಿಂದ ಸರ್ಕಾರ ಶಾಲಾ ನಿರ್ವಹಣೆ ಮತ್ತು ಮೇಲುಸ್ತುವಾರಿಗೆ ನೀಡುವ ಸಹಾಯಧನ ಬಳಸಿಕೊಂಡು ಮೇಲಿನ ಕಾರ್ಯಗಳಿಗೆ ಬಳಸುವುದನ್ನು ಬಿಟ್ಟು ಶಾಲಾ ಮಕ್ಕಳಿಂದ ಕೆಲಸ ಮಾಡಿಸಿ ಅದೆ ಹಣವನ್ನು ಗುಳುಂ ಮಾಡಲು ಹೊರಟಿದ್ದಾರಾ ಎಂಬ ಸಂಶಯಕ್ಕೆ ಎಡೆ ಮಾಡಿ‌ಕೊಟ್ಟಿದೆ.ದೈಹಿಕ ಶಿಕ್ಷಕಿಯಿಂದ ಮಕ್ಕಳ ದುರ್ಬಳಕೆ ಕೂಡ ಮುಂದುವರೆದಿದೆ

ಮಕ್ಕಳ ದುರ್ಬಳಕೆ ಬಗ್ಗೆ ಶಾಲಾ ಹೆಡ್ ಮಾಸ್ತರಗೆ ಗೊತ್ತಿದ್ದರೂ ಕಂಡರೂ ಕಾಣದಂತೆ ವರ್ತಿಸುತಿದ್ದಾರೆ, ಮಕ್ಕಳಿಗೆ ಶಿಕ್ಷಣ ನೀಡುವ ಬದಲು ಕೆಲಸಕ್ಕೆ ಬಳಸಿಕೊಂಡ ದೈಹಿಕ ಶಿಕ್ಷಕಿಗೆ ವಿದ್ಯಾರ್ಥಿಗಳನ್ನು ಬಾಲ ಕಾರ್ಮಿಕರಂತೆ ದುಡಿಸಿಕೊಂಡ ಶಿಕ್ಷಕಿಗೆ ಕಾರ್ಮಿಕ ಅಧಿಕಾರಿಗಳು ಮೇಲಾಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡ ಬೇಕಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!