ಇಳಕಲ್:-ನಗರಸಭೆಯ ಗದ್ದುಗೆ ಹಿಡಿಯುವಲ್ಲಿ ಸುರೇಶ್ ಜಂಗ್ಲಿ ಹಾಗೂ ಕಾಂಗ್ರೆಸ್ ಮುಖಂಡರ ಪರಿಶ್ರಮ ಫಲಶ್ರುತಿ ಆಗುತ್ತಾ?????.
ಬಹು ನಿರೀಕ್ಷಿತ ಇಳಕಲ್ ನಗರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಇದೇ ತಿಂಗಳು 20ನೇ ತಾರೀಖಿನಂದು
ನಡೆಯಲಿದೆ.ಹೀಗಾಗಿ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಸದಸ್ಯರು ಪ್ರವಾಸಕ್ಕೆ ತೆರೆದಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಸುಧಾರಾಣಿ ಸಂಗಮ ಶರಣಮ್ಮ ತಿಮ್ಮಾಪುರ್ ಅಧ್ಯಕ್ಷ ಸ್ಥಾನಗಳಿಗೆ ಪ್ರಬಲ ಪೈಪೋಟಿ ನಡೆಸಿದ್ದಾರೆ. ಇವರಿಬ್ಬರಲ್ಲಿ ಒಬ್ಬರ ಆಯ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಮೇಲಿದೆ. ಶಾಸಕರ ತೀರ್ಮಾನ ಅಂತಿಮ ತೀರ್ಮಾನವಾಗಿದೆ. ಕಾಂಗ್ರೆಸ್ ಪಕ್ಷ ಸದಸ್ಯರ ಸ್ಥಾನ ಎಂಟು ಇದ್ದು ಕಾಂಗ್ರೆಸ್ ಪಕ್ಷ ಮ್ಯಾಜಿಕ್ ನಂಬರನ್ನು ಮುಟ್ಟಲು ಬಿಜೆಪಿ ಜೆಡಿಎಸ್ ಸದಸ್ಯರನ್ನು ಸೆಳೆಯುವ ಕಾರ್ಯ ತಂತ್ರಕ್ಕೆ ಮುಂದಾಗಿದ್ದಾರೆ.
ಈಗಾಗಲೇ ಕಾಂಗ್ರೆಸ್ ನಗರ ಸಭಾ ಸದಸ್ಯ ಸುರೇಶ್ ಜಂಗ್ಲಿ ಹಾಗೂ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ ಬಿಜೆಪಿ ಜೆಡಿಎಸ್ ಸದಸ್ಯರನ್ನು ಸೆಳೆಯುವಲ್ಲಿ ಇವರ ನೇತೃತ್ವ ಇದೆ ಎಂದು ಗುಮಾನಿ ಹಬ್ಬಿದೆ.ಶಾಸಕ ವಿಜಯಾನಂದ ಕಾಶಪ್ಪನವರ್ ಸುರೇಶ್ ಜಂಗ್ಲಿ ಅವರ ಉಸ್ತುವಾರಿಯಲ್ಲಿ ಅನ್ಯ ಪಕ್ಷದವರನ್ನು ಸೆಳೆದು ಅಧಿಕಾರ ಹಿಡಿಯುವಲ್ಲಿ ಶತ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಲ್ಪಡುತ್ತಿವೆ…
ಕ್ಷೇತ್ರದಲ್ಲಿ ಮಾತ್ರ ಆಡಳಿತ ಪಕ್ಷ ವಾದ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಸಫಲವಾಗುತ್ತದೆ ಎಂಬ ವಿಶ್ವಾಸದಲ್ಲಿ ಇದ್ದಾರೆಂದ ಮಾತುಗಳು ಕೇಳಿ ಬರುತ್ತಿವೆ…
ವರದಿ :- ದಾವಲ್ ಸೇಡಂ